ಜೂ.1ರಿಂದ ಹೆಲ್ಮೆಟ್ ಕಡ್ಡಾಯ

ಸುಮನ್ ಡಿ.ಪನ್ನೇಕರ್
ಸುಮನ್ ಡಿ.ಪನ್ನೇಕರ್
Published on

ಪ್ರಮುಖ ಮುಖ್ಯಾಂಶಗಳು

  • ಸವಾರ
ಬಳ್ಳಾರಿ : ಜಿಲ್ಲಾದ್ಯಂತ ಜೂ.1ರಿಂದ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದ್ದು, ಧರಿಸದೆ ಚಲಾಯಿಸದವರಿಗೆ ದಂಡ ವಿಧಿಸಲಾಗುವುದು ಎಂದು ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್ ತಿಳಿಸಿದರು.
ನಗರದ ಎಸ್ಪಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಲ್ಲಿ 1,009 ಅಪಘಾತ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 462 ಜನರು ಮೃತಪಟ್ಟಿದ್ದು, 1072 ಜನರು ಗಾಯಾಳು ಆಗಿದ್ದಾರೆ. ಇದರಲ್ಲಿ ಬಹುತೇಕರು ಬೈಕ್ ಚಲಾಯಿಸುವ ವೇಳೆ ಹೆಲ್ಮೆಟ್‌ಯಿಲ್ಲದ ಬಿದ್ದು ತಲೆಗೆ ಪೆಟ್ಟಾಗಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ಇಲಾಖೆಯಿಂದ ಮೇನಿಂದ ಜೂನ್ ತಿಂಗಳವರೆಗೆ ನಗರದಲ್ಲಿ ಬೈಕ್ ರೈಡಿಂಗ್, ಮ್ಯಾರಾಥಾನ್ ಸೇರಿದಂತೆ ನಾನಾ ಕಾರ್ಯಕ್ರಮಗಳ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಈಗಾಗಲೇ ಶಾಲಾ ಕಾಲೇಜುಗಳಲ್ಲಿ ಹೆಲ್ಮೆಟ್ ಬಗ್ಗೆ ಯುವಕರಲ್ಲಿ ಅರಿವು ಮೂಡಿಸಲಾಗಿದೆ. ಜೂನ್ ತಿಂಗಳಿಂದ ಯಾರೇ ಹೆಲ್ಮೆಟ್‌ಯಿಲ್ಲದೆ ಬೈಕ್ ಚಲಾಯಿಸಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.
ಅಪ್ರಾಪ್ತ ಬಾಲಕರು ಬೈಕ್ ಚಲಾಯಿಸದರೆ, 25 ಸಾವಿರ ರೂ. ದಂಡವನ್ನು ಪಾಲಕರಿಗೆ ಅಥವಾ ದ್ವಿಚಕ್ರ ಕೊಟ್ಟ ಮಾಲೀಕರಿಗೆ ವಿಧಿಸಲಾಗುವುದು. ಆದ್ದರಿಂದ, ಅಪ್ತಾಪ್ತ ಬಾಲಕರಿಗೆ ಯಾರು ಕೂಡ ಬೈಕ್ ನೀಡಬಾರದು ಎಂದು ಮನವಿ ಮಾಡಿದರು.
ತಾಲೂಕಿನ ತೋರಗಣಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷದ ಹಿಂದೆ ತಾಯಿ, ಮಗು ನಾಪತ್ತೆ ಪ್ರಕರಣ ದಾಖಲಾಗಿತ್ತು. ದೂರು ದಾಖಲಾದ ಆರು ತಿಂಗಳ ನಂತರ ಪ್ರಕರಣವನ್ನು ಮಾನವ ಕಳ್ಳಸಾಗಣಿಕೆ ವಿರೋಧಿ ಘಟಕ (ಎಎಚ್‌ಟಿಯು)ಕ್ಕೆ ವರ್ಗಾಯಿಸಲಾಗಿತ್ತು. ತಂಡವು ಕಳೆದ ತಿಂಗಳು ಆಂಧ್ರದ ವಿಶಾಖಪಟ್ಟಣದಲ್ಲಿ ತಾಯಿ, ಮಗುವನ್ನು ಪತ್ತೆ ಹಚ್ಚಲಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net