ಗ್ರಾಹಕರು ಜಾಗೃತಿ ಹೊಂದಿ

ಬಳ್ಳಾರಿಯ ಶ್ರೀಮೇಧಾ ಕಾಲೇಜಿನಲ್ಲಿ  ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ಉದ್ಘಾಟಿಸಿದರು. ವಕೀಲರಾದ ಅಂಕಲಯ್ಯ, ಎನ್.ಪ್ರಕಾಶ್, ಆಹಾರ ಇಲಾಖೆಯ ಉಪನಿರ್ದೇಶಕ ಕೆ.ಆರ್.ದೇವರಾಜ್, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಖುಷ್ವಂತ್ ಇದ್ದರು.
ಬಳ್ಳಾರಿಯ ಶ್ರೀಮೇಧಾ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ಉದ್ಘಾಟಿಸಿದರು. ವಕೀಲರಾದ ಅಂಕಲಯ್ಯ, ಎನ್.ಪ್ರಕಾಶ್, ಆಹಾರ ಇಲಾಖೆಯ ಉಪನಿರ್ದೇಶಕ ಕೆ.ಆರ್.ದೇವರಾಜ್, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಖುಷ್ವಂತ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಹಕರು
ಬಳ್ಳಾರಿ : ಗ್ರಾಹಕರಿಗೆ ತಾವು ಪಡೆಯುವ ವಸ್ತು ಅಥವಾ ಸೇವೆಯಲ್ಲಿ ಯಾವುದೇ ಲೋಪ ಕಂಡಲ್ಲಿ, ಅದನ್ನು ಪ್ರಶ್ನಿಸುವ ಮತ್ತು ಪರಿಹಾರ ಪಡೆಯುವ ಸಂಪೂರ್ಣ ಹಕ್ಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಹೇಳಿದರು.
ನಗರದ ಶ್ರೀಮೇಧಾ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಹಾರ ಸುರಕ್ಷತಾ ಇಲಾಖೆ ಸಹಯೋಗದೊಂದಿಗೆ ಸುರಕ್ಷಿತ ಉತ್ಪನ್ನಗಳು ಆತ್ಮ ವಿಶ್ವಾಸದ ಗ್ರಾಹಕರು ಎಂಬ ಘೋಷವಾಕ್ಯದಡಿ ಬುಧವಾ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ಆನ್‌ಲೈನ್ ಶಾಪಿಂಗ್ ಹೆಚ್ಚಾತ್ತಿದ್ದು, ಇ-ಕಾಮರ್ಸ್ ಸಂಸ್ಥೆಗಳ ಮೂಲಕ ನಡೆಯುವ ವಂಚನೆಗಳ ಬಗ್ಗೆಯೂ ಪ್ರತಿಯೊಬ್ಬರೂ ತಿಳುವಳಿಕೆ ಹೊಂದಬೇಕು. ಗ್ರಾಹಕರು ತಮಗಿರುವ ಹಕ್ಕುಗಳ ಬಗ್ಗೆ ಜಾಗೃತಿ ಹೊಂದಿದಾಗ ಮಾತ್ರ ಸದೃಢ ದೇಶದ ಪ್ರಗತಿಯ ಹಾದಿ ಕಾಣಬಹುದು
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ತಿಪ್ಪೇಸ್ವಾಮಿ ಎನ್ ಮಾತನಾಡಿ, ಪ್ರತಿಯೊಬ್ಬ ಹಣ ಪಾವತಿಸಿ ಸೇವೆ ಅಥವಾ ವಸ್ತುವನ್ನು ಪಡೆಯುವ ವ್ಯಕ್ತಿಯೂ ಗ್ರಾಹಕನೇ. ನಾವು ಜಾಗೃತರಾದಾಗ ಮಾತ್ರ ಮೋಸವನ್ನು ತಡೆಯಲು ಸಾಧ್ಯ. ಗ್ರಾಹಕರಿಗೆ ಆಗುವ ಅನ್ಯಾಯ, ಮೋಸ ಅಥವಾ ಗುಣಮಟ್ಟದ ಸೇವೆಯಲ್ಲಿನ ಲೋಪಗಳ ವಿರುದ್ಧ ಧ್ವನಿ ಎತ್ತಲು ಪ್ರತಿ ಜಿಲ್ಲೆಯಲ್ಲಿ ಗ್ರಾಹಕ ವೇದಿಕೆ ಅಥವಾ ಆಯೋಗಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net