ತೆರಿಗೆ ವಸೂಲಾತಿಯಲ್ಲಿ ಹರಪನಹಳ್ಳಿ ದಾಖಲೆ

ಬಾಗಳಿ ಗ್ರಾಮದಲ್ಲಿ ಕರ ವಸೂಲಾತಿ ಅಭಿಯಾನಕ್ಕೆ ಚಾಲನೆ ನೀಡಿದ ಸಿಇಒ ನೋಂಗ್ಜಾಯ್ ಮಹಮ್ಮದ್ ಅಲಿ ಅಕ್ರಂ ಶಾ.
ಬಾಗಳಿ ಗ್ರಾಮದಲ್ಲಿ ಕರ ವಸೂಲಾತಿ ಅಭಿಯಾನಕ್ಕೆ ಚಾಲನೆ ನೀಡಿದ ಸಿಇಒ ನೋಂಗ್ಜಾಯ್ ಮಹಮ್ಮದ್ ಅಲಿ ಅಕ್ರಂ ಶಾ.
Published on
ಹರಪನಹಳ್ಳಿ: ಗ್ರಾಮ ಪಂಚಾಯಿತಿ ತೆರಿಗೆ ವಸೂಲಾತಿಯಲ್ಲಿ ಶೇ.100 ಗುರಿ ಸಾಧಿಸುವ ಮೂಲಕ ಹರಪನಹಳ್ಳಿ ತಾಲೂಕು ಸತತ ಏಳನೇ ವರ್ಷವೂ ವಿಜಯನಗರ ಜಿಲ್ಲೆಗೆ ಪ್ರಥಮ ಸ್ಥಾನ ಉಳಿಸಿಕೊಂಡು ದಾಖಲೆ ನಿರ್ಮಿಸಿದೆ.
ಪ್ರಸಕ್ತ ಸಾಲಿನಲ್ಲಿ 4.09 ಕೋಟಿ ರೂ. ಕಂದಾಯ ಬೇಡಿಕೆ ಇತ್ತು. ಪಂಚಾಯಿತಿ ಅಧಿಕಾರಿಗಳ ವಿಶೇಷ ಅಭಿಯಾನದಿಂದಾಗಿ ಬೇಡಿಕೆಗಿಂತ ಅಧಿಕವಾಗಿ ತೆರಿಗೆ ಸಂಗ್ರಹಿಸಲಾಗಿದೆ. ಇದು ಒಟ್ಟಾರೆ ಶೇ.100.34 ಸಾಧನೆಯಾಗಿದೆ. ಇದರಲ್ಲಿ ಮೈದೂರು ಪಂಚಾಯಿತಿ ಶೇ.186.34 ಸಾಧನೆ ಗೈದಿದೆ. ತಾಪಂ ಇಒ ವೈ.ಎಚ್. ಚಂದ್ರಶೇಖರ, ಸಹಾಯಕ ನಿರ್ದೇಶಕ ಯು.ಎಚ್. ಸೋಮಶೇಖರ ಹಾಗೂ ಯೋಜನಾಧಿಕಾರಿ ನವೀನ್ ಕುಮಾರ್ ತಂಡಗಳು ಕಾರ್ಯನಿರ್ವಹಿಸಿವೆ. ಇವರ ಜೊತೆಗೆ ಉದ್ಯೋಗ ಖಾತ್ರಿ ಯೋಜನೆಯ ಜಿಪಿಆರ್ ಸಿಬ್ಬಂದಿ, ಗ್ರಾಮ ಕಾಯಕ ಮಿತ್ರರು, ತಾಂಡಾ ರೋಜ್‌ಗಾರ್ ಕಾರ್ಯಕರ್ತರು, ಎಸ್‌ಆರ್‌ಬಿಎಂ ಹಾಗೂ ಪಶುಸಖಿ, ಬ್ಯಾಂಕ್ ಸಖಿಯರು ಅಭಿಯಾನದ ಯಶಸ್ಸಿಗೆ ಕೈಜೋಡಿಸಿದ್ದರು.
ನಮ್ಮ ಗ್ರಾಮ ನಮ್ಮ ತೆರಿಗೆ ಅಭಿಯಾನವನ್ನು ಸಹಕಾರಿ ನೋಡೆಲ್ ಅಧಿಕಾರಿಗಳ ನೇತೃತ್ವದಲ್ಲಿ ರೂಪಿಸಲಾಗಿತ್ತು. ಈ ಅಭಿಯಾನದಲ್ಲಿ ಪಿಡಿಒಗಳು ಮತ್ತು ಸಿಬ್ಬಂದಿ ಮನೆ ಮನೆಗೆ ತೆರಳಿ ತೆರಿಗೆ ಪಾವತಿಯ ಮಹತ್ವ ಹಾಗೂ ಆನ್‌ಲೈನ್ ಪಾವತಿ ಬಗ್ಗೆ ಅರಿವು ಮೂಡಿಸಿದ್ದರು ಎಂದು ಇಒ ವೈ.ಎಚ್. ಚಂದ್ರಶೇಖರ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net