ವಚನ ಸಾಹಿತ್ಯಕ್ಕೆ ಹಳಕಟ್ಟಿ ಕೊಡುಗೆ ಅಪಾರ

ಬಳ್ಳಾರಿಯಲ್ಲಿ  ಡಾ.ಫ.ಗು. ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮವನ್ನು ತಹಸೀಲ್ದಾರ್ ವಿನಾಯಕ ಗೋಡ್ಬಾಳೆ ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ, ಪ್ರೊ.ಆಲಂಭಾಷಾ ಇದ್ದರು.
ಬಳ್ಳಾರಿಯಲ್ಲಿ ಡಾ.ಫ.ಗು. ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮವನ್ನು ತಹಸೀಲ್ದಾರ್ ವಿನಾಯಕ ಗೋಡ್ಬಾಳೆ ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ, ಪ್ರೊ.ಆಲಂಭಾಷಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗುರುಬಸಪ್ಪ ಹಳಕಟ್ಟಿ ಕೊಡುಗೆ ಅಪಾರ
  • ದೇಶದ ಮೂಲೆ ಮೂಲೆಗಳಿಂದ ಸಂಗ್ರಹ
ಬಳ್ಳಾರಿ : ಶರಣರನ್ನು ಹಿಮ್ಮೆಟ್ಟಿಸುವ ಹಾಗೂ ವಚನಗಳನ್ನು ನಾಶಮಾಡುವ ಸಂಚು ನಡೆದಾಗ ರಕ್ಷಿಸುವ ಕಾರ್ಯವನ್ನು ವಚನ ಪಿತಾಮಹ ಫ. ಗು.ಹಳಕಟ್ಟಿ ಅವರು ಕೈಗೆತ್ತಿಕೊಂಡಿದ್ದರು ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿದರು.
ನಗರದ ಸಾಂಸ್ಕೃತಿಕ ಸಮುಚ್ಛಯದ ಹೊಂಗಿರಣ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ಡಾ.ಫ.ಗು. ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 19 ನೇ ಶತಮಾನದ ಆರಂಭದಲ್ಲಿ ಕೇವಲ 25 ವಚನಕಾರರ ಬೆರಳೆಣಿಕೆಯಷ್ಟು ವಚನಗಳು ಮಾತ್ರ ಬೆಳಕಿನಲ್ಲಿದ್ದವು. ಅಂತಹ ಸಂದರ್ಭದಲ್ಲಿ ಹಳಕಟ್ಟಿ ಅವರು ಸುಮಾರು 22,000 ವಚನಗಳನ್ನು ದೇಶದ ಮೂಲೆ ಮೂಲೆಗಳಿಂದ ಸಂಗ್ರಹಿಸಿದರು ಎಂದರು.
ಹನ್ನೆರಡನೇ ಶತಮಾನದ ಕಲ್ಯಾಣ ಕ್ರಾಂತಿಯ ನಂತರ ಚಲ್ಲಾಪಿಲ್ಲಿಯಾಗಿ ಕಣ್ಮರೆಯಾಗುತ್ತಿದ್ದ ವಚನ ಸಾಹಿತ್ಯವನ್ನು ಮರುಸಂಗ್ರಹಿಸಿ, ಸಂಪಾದಿಸಿ, ಪ್ರಕಟಿಸುವ ಮೂಲಕ ಕನ್ನಡ ಜನತೆಗೆ ವಚನಗಳ ಬೆಳಕನ್ನು ನೀಡಿದ ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಕೊಡುಗೆ ಅಪಾರ ಎಂದರು. ಪ್ರೊ.ಆಲಂಭಾಷಾ ಮಾತನಾಡಿ, ವಚನ ಎಂದರೆ ಕೇವಲ ಸಾಲುಗಳಲ್ಲ ವ ಎಂದರೆ ವಚಿಸುವುದು ಅಂದರೆ ಕೇಳಲು ಇಷ್ಟವಾಗುವುದು, ಚ ಎಂದರೆ ಚಲಿಸುವುದು ಅಂದರೆ 12ನೇ ಶತಮಾನದಿಂದ ಹಿಡಿದು 21ನೇ ಶತಮಾನದವರೆಗೂ ನಿರಂತರವಾಗಿ ಸಾಗಿಬಂದಿರುವುದು, ಮತ್ತು ನ ಎಂದರೆ ನಯನಿಸುವುದು ಅಂದರೆ ಕಣ್ಣಿಗೆ ಸುಂದರವಾಗಿ ಕಾಣುವುದು ಎಂದು ಅರ್ಥೈಸಿದರು. ಕಾರ್ಯಕ್ರಮದಲ್ಲಿ ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸಲಾಯಿತು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net