ಸಿರಗುಪ್ಪದ ಹಲವೆಡೆ ಆಲಿಕಲ್ಲು ಮಳೆ

ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಆಲಿಕಲ್ಲು ಮಳೆಯಾಗಿರುವುದು.
ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಆಲಿಕಲ್ಲು ಮಳೆಯಾಗಿರುವುದು.
Published on
ಸಿರಗುಪ್ಪ: ತಾಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಗುಡುಗು ಸಿಡಿಲಿನೊಂದಿಗೆ ಆಲಿಕಲ್ಲು ಮಳೆ ಸುರಿಯಿತು.
ಮಂಗಳವಾರ ಬೆಳಗ್ಗೆ ತಾಪಮಾನದಲ್ಲಿ ಇಳಿಕೆಯಾಗಿದ್ದು, ಸಂಜೆ ಗಾಳಿ, ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಮಳೆ ಸುರಿಯಿತು. ನಗರ ಸೇರಿದಂತೆ ತಾಲೂಕಿನ ಅಗಸನೂರು, ಇಬ್ರಾಹಿಂಪುರ, ಬಾಗೇವಾಡಿ, ರಾರಾವಿ, ಬಗ್ಗೂರು, ಬಂಡ್ರಾಳ, ಶಾಲಿಗನೂರು, ಪೊಪ್ಪನಾಳ, ರಾವಿಹಾಳ್, ಭೈರಗಾಮಿದಿನ್ನಿ, ಅಗಸನೂರು, ಮಿಟ್ಟೆಸೂಗೂರು, ಗುಬ್ಬಿಹಾಳು ಗ್ರಾಮದಲ್ಲಿ ಆಲಿಕಲ್ಲು ಮಳೆ ಬಂದಿದೆ. ಹೊಲದಲ್ಲಿ ಬಿತ್ತನೆಪೂರ್ವ ಚಟುವಟಿಕೆ ಕೈಗೊಳ್ಳಲು ರೈತರಿಗೆ ಅನುಕೂಲವಾದಂತಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net