ಕಾಂಗ್ರೆಸ್‌ಗೆ ವರ ಗ್ಯಾರಂಟಿ ಯೋಜನೆಗಳು

ಶ್ರೀರಾಮರಂಗಾಪುರದಲ್ಲಿ ಸಿಸಿ ರಸ್ತೆ ಅಭಿವೃದ್ಧಿಗೆ ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿದರು.
ಶ್ರೀರಾಮರಂಗಾಪುರದಲ್ಲಿ ಸಿಸಿ ರಸ್ತೆ ಅಭಿವೃದ್ಧಿಗೆ ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿದರು.
Published on
ಕಂಪ್ಲಿ: ರಾಜ್ಯದ ಎರಡು ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಶ್ರೀರಾಮರಂಗಾಪುರದಲ್ಲಿ 5 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಶುಕ್ರವಾರ ಮಾತನಾಡಿದರು. ಗ್ಯಾರಂಟಿ ಯೋಜನೆಗಳಿಂದಾಗಿ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರ ಕಾಂಗ್ರೆಸ್ ಕೈ ವಶ ಆಗಲಿವೆ. ಶ್ರೀರಾಮರಂಗಾಪುರದಿಂದ ಮಾರುತಿ ಕ್ಯಾಂಪ್ ಮೂಲಕ ಯಲ್ಲಾಪುರವರೆಗೆ ಆರು ಕೋಟಿ ರೂ., ಎಮ್ಮಿಗನೂರು ಕ್ರಾಸ್‌ನಿಂದ ಓರ‌್ವಾಯಿ, ಗುತ್ತಿಗೆನೂರುವರೆಗೆ 10 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕ್ಷೇತ್ರದಲ್ಲಿ 200 ಕಿ.ಮೀ.ಗಿಂತ ಅಧಿಕ ಲೋಕೋಪಯೋಗಿ ಇಲಾಖೆ ರಸ್ತೆ ಅಭಿವೃದ್ಧಿಗೊಳಿಸಲಾಗಿದೆ. ಮಾಗಾಣಿ ರಸ್ತೆಗಳ ಅಭಿವೃದ್ಧಿಗಾಗಿ ಶಾಸಕರ ಅನುದಾನವನ್ನು ಎರಡು ಕೋಟಿ ರೂ.ಯಿಂದ ಐದು ಕೋಟಿ ರೂ.ಗೆ ಏರಿಸುವಂತೆ ಸಿಎಂ ಅವರನ್ನು ಒತ್ತಾಯಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎನ್ನುವ ಬಿಜೆಪಿಗರ ಆರೋಪದಲ್ಲಿ ಹುರುಳಿಲ್ಲ ಎಂದರು.
ಪ್ರಮುಖರಾದ ಮೋದಿಪಲ್ಲೆ ಮಂಜುನಾಥ, ಮಾವಿನಹಳ್ಳಿ ವಿರುಪಣ್ಣ, ಬಿ.ನಾರಾಯಣಸ್ವಾಮಿ, ಡಿ.ವೆಂಕಟಸ್ವಾಮಿ, ಚಿನ್ನಹನುಮಂತ, ಪುಲ್ಸೆ ನಾಗೇಶ, ಡಿ.ವೆಂಕಟೇಶ, ವೆಂಕಟರಾಮುಡು, ನಾಗಭೂಷಣ, ರಂಗನಾಥರೆಡ್ಡಿ, ವೆಂಕಟಪತಿ, ನಾರಾಯಣ ಚೌದ್ರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net