ಹೂವಿನಹಡಗಲಿ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಬಿ ಜಿ ರಾಮ್ ಜಿ ಯೋಜನೆ ಅನುಷ್ಠಾನ ತರಬೇತಿ ಕಾರ್ಯಕ್ರಮವನ್ನು ತಾಪಂ ಇಒ ಪರಮೇಶ್ವರ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ಯು.ಎಚ್.ಸೋಮಶೇಖರ, ಎಡಿ ವೀರಣ್ಣ ನಾಯ್ಕ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಕಿರಣಕುಮಾರ್ ಕಲ್ಲಮ್ಮನವರ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಸೋಮಶೇಖರ ಹೇಳಿಕೆ
ವಿಬಿ ಜಿ ರಾಮ್ ಜಿ ಯೋಜನೆ ಅನುಷ್ಠಾನ ತರಬೇತಿ
ಹೂವಿನಹಡಗಲಿ; ಉದ್ಯೋಗಖಾತ್ರಿ ಯೋಜನೆ ಮಾದರಿಯಲ್ಲೇ ವಿಬಿ ಜಿ ರಾಮ್ ಜಿ ಯೋಜನೆ ಇದ್ದು, ಹೆಚ್ಚಿನ ಬದಲಾವಣೆಗಳಾಗಿಲ್ಲ. ಉದ್ಯೋಗ ಕಾರ್ಡ್ ಬದಲಾಗಿ ಗ್ಯಾರಂಟಿ ಕಾರ್ಡ್ ಬರಲಿದೆ ಎಂದು ಸಂಪನ್ಮೂಲ ವ್ಯಕ್ತಿ ಯು.ಎಚ್.ಸೋಮಶೇಖರ ಹೇಳಿದರು.
ತಾಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಬಿ ಜಿ ರಾಮ್ ಜಿ ಯೋಜನೆ ಅನುಷ್ಠಾನ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿ ಮೂರು ವರ್ಷಕ್ಕೊಮ್ಮೆ ಕಾಯ್ದೆ ಬದಲಾವಣೆ ಆಗಲಿದೆ. ಈ ಯೋಜನೆಯಡಿ ವಿಶೇಷ ಗ್ಯಾರಂಟಿ ಕಾರ್ಡ್ ಇದ್ದು, ಅಂಗವಿಕಲರು, ತೃತಿಯ ಲಿಂಗಿಗಳಿಗೂ ಕೆಲಸ ನೀಡಲಾಗುವುದು. ಈ ಕಾಯ್ದೆ ಗ್ರಾಮೀಣ ಭಾಗದ ಕುಟುಂಬಗಳಿಗೆ ವಾರ್ಷಿಕ ಉದ್ಯೋಗ ಖಾತ್ರಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸುವ ಮೂಲಕ ಆರ್ಥಿಕ ಭದ್ರತೆ ನೀಡಲಿದೆ ಎಂದು ತಿಳಿಸಿದರು.
ವಿಬಿ ಜಿ ರಾಮ್ ಜಿ ಕಾಯ್ದೆ ಜಲ ಭದ್ರತೆ, ಗ್ರಾಮೀಣ ರಸ್ತೆಗಳು ಮತ್ತು ಜೀವನೋಪಾಯಕ್ಕೆ ಶಾಶ್ವತ ಆಸ್ತಿ ಸೃಜನೆಗೆ ಹೆಚ್ಚಿನ ಒತ್ತು ನೀಡುತ್ತದೆ. ಪಾರದರ್ಶಕತೆಗಾಗಿ ಬಯೋಮೆಟ್ರಿಕ್ ಹಾಜರಾತಿ, ಜಿಪಿಎಸ್ ಮೇಲ್ವಿಚಾರಣೆ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ಕೆಲಸ ಕೇಳಿದ 15 ದಿನಗಳಲ್ಲಿ ಉದ್ಯೋಗ ನೀಡದಿದ್ದರೆ, ರಾಜ್ಯ ಸರ್ಕಾರ ಕಡ್ಡಾಯವಾಗಿ ನಿರುದ್ಯೋಗ ಭತ್ಯೆ ನೀಡಬೇಕಾಗುತ್ತದೆ ಎಂದರು.
ತಾಪಂ ಇಒ ಪರಮೇಶ್ವರ, ಎಡಿ ವೀರಣ್ಣ ನಾಯ್ಕ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಕಿರಣಕುಮಾರ್ ಕಲ್ಲಮ್ಮನವರ್, ತಾಲೂಕು ಸಾಮಾಜಿಕ ಲೆಕ್ಕ ಪರಿಶೋಧನಾ ಸಂಪನ್ಮೂಲ ವ್ಯಕ್ತಿ ಎಲ್.ಶಿವಕುಮಾರ ನಾಯ್ಕ, ಮಾಹಿತಿ ಶಿಕ್ಷಣ ಸಂವಹನ ಸಂಯೋಜಕ ಆರ್.ಪ್ರಕಾಶನಾಯ್ಕ, ತಾಂತ್ರಿಕ ಸಂಯೋಜಕ ಟಿ.ಎಂ.ರವಿಕುಮಾರ ಇತರರಿದ್ದರು.