ನೀರು ಮರುಪೂರಣದಿಂದ ಅಂತರ್ಜಲ ಹೆಚ್ಚಳ

ಕೂಡ್ಲಿಗಿಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಲಧರಗಳ ನಕಾಶಿಕೆ ಮತ್ತು ಅಂತರ್ಜಲ ಸಂರಕ್ಷಣೆ ಕುರಿತ ಸಾರ್ವಜನಿಕ ಸಂವಹನ ಕಾರ್ಯಕ್ರಮವನ್ನು ಕೇಂದ್ರೀಯ ಅಂತರ್ಜಲ ಮಂಡಳಿ ಪ್ರಾದೇಶಿಕ ನಿರ್ದೇಶಕ ಜಿ. ಕೃಷ್ಣಮೂರ್ತಿ ಉದ್ಘಾಟಿಸಿದರು. ಜಿಯೋ ಮಳೆ ನೀರು ಮಂಡಳಿ ಸಂಸ್ಥಾಪಕ ಎನ್.ಜೆ.ದೇವರಾಜ ರೆಡ್ಡಿ, ಜಿಲ್ಲಾ ಅಂತರ್ಜಲ ನಿರ್ದೇಶನಾಲಯದ ಹಿರಿಯ ನಿರ್ದೇಶಕ ವಿ.ಬಸಂತ, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಹಕ ಎಂಜನಿಯರ್ ಜೆ.ಮಂಜುನಾಥ, ತಾಪಂ ಲೆಕ್ಕಾಧಿಕಾರಿ ಮರೇಗೌಡ್ರ ಮಾಲತೇಶ, ಮಂಡಳಿಯ ವಿಜ್ಞಾನಿ ಜೆ.ದವಿತ್ ರಾಜ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪಟ್ಟಣ
  • ಪ್ರವಾಸಿ
  • ಮಂದಿರ
ಕೂಡ್ಲಿಗಿ: ಜಮೀನಿನಲ್ಲಿ ಬಿದ್ದ ನೀರು ನಮ್ಮದು ಎಂಬ ಭಾವನೆ ಮೂಡಿದಾಗ ಮಾತ್ರ ಅಂತರ್ಜಲ ಹೆಚ್ಚಳ ಮಾಡಲು ಸಾಧ್ಯ ಎಂದು ಜಿಯೋ ಮಳೆ ನೀರು ಮಂಡಳಿ ಸಂಸ್ಥಾಪಕ ಎನ್.ಜೆ.ದೇವರಾಜ ರೆಡ್ಡಿ ಹೇಳಿದರು.
ಕೇಂದ್ರೀಯ ಅಂತರ್ಜಲ ಮಂಡಳಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಲಧರಗಳ ನಕಾಶಿಕೆ ಮತ್ತು ಅಂತರ್ಜಲ ಸಂರಕ್ಷಣೆ ಕುರಿತು ಹಮ್ಮಿಕೊಂಡಿದ್ದ ಸಾರ್ವಜನಿಕ ಸಂವಹನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಅವೈಜ್ಞಾನಿಕ ಜ್ಞಾನದಿಂದ ಅನೇಕ ಕೊಳವೆ ಬಾವಿಗಳು ವಿಫಲವಾಗುತ್ತವೆ. ನೀರು ಮರುಪೂರಣ ಮಾಡಿದರೆ ಅಂತರ್ಜಲ ಹೆಚ್ಚಾಗುತ್ತದೆ. ಅದ್ದರಿಂದ ಪ್ರತಿಯೊಬ್ಬರೂ ಕೊಳವೆ ಬಾವಿಗಳಲ್ಲಿ ನೀರು ಮರುಪೂರಣಕ್ಕೆ ಮುಂದಾಗಬೇಕು. ಮನೆಗಳಲ್ಲಿ ಮಳೆ ನೀರು ಸಂಗ್ರಹಿಸಿ ನೀರನ್ನು ಮಿತವಾಗಿ ಬಳಸಬೇಕು. ಮಳೆ ಇಲ್ಲದೆ ನೀರಿನ ಮೂಲಗಳು ಬತ್ತುತ್ತವೆ. ಮಕ್ಕಳಲ್ಲಿ ನೀರಿನ ಬಗ್ಗೆ ಅರಿವು ಮೂಡಿಸುವುದು ಅಗತ್ಯ ಎಂದರು.
ಕೇಂದ್ರೀಯ ಅಂತರ್ಜಲ ಮಂಡಳಿ ಪ್ರಾದೇಶಿಕ ನಿರ್ದೇಶಕ ಜಿ. ಕೃಷ್ಣಮೂರ್ತಿ ಮಾತನಾಡಿ, ಅಂತರ್ಜಲ ಮಟ್ಟದಲ್ಲಿ 2017ರವರೆಗೆ ಉಪಸುರಕ್ಷಿತಾ ವಲಯದಲ್ಲಿದ್ದ ಕೂಡ್ಲಿಗಿ ತಾಲೂಕು ಇದೀಗ ಸುರಕ್ಷಿತಾ ವಲಯದಲ್ಲಿದೆ. ಚೆಕ್ ಡ್ಯಾಂ ಸೇರಿದಂತೆ ವಿವಿಧ ಕಾರ್ಯಕ್ಕೆ ಕಾರಣವಾಗಿದೆ. ಅಂತರ್ಜಲ ಸಂಶೋಧನೆ ಮಾಡುವುದು ಮುಖ್ಯ ಉದ್ದೇಶವಾಗಿದ್ದು, ನೀರು ಸಂಗ್ರಹ ಮತ್ತು ಗುಣಮಟ್ಟದ ಬಗ್ಗೆ ವರದಿ ಸಿದ್ಧಪಡಿಸುತ್ತೇವೆ. ಅಪರಿಮಿತ ಬಳಕೆಯಿಂದ ಬೆಂಗಳೂರು ಸುತ್ತಲಿನ ಜಿಲ್ಲೆಗಳಲ್ಲಿ ಅಂತರ್ಜಲ ಸಂಪೂರ್ಣ ಪಾತಾಳ ಮುಟ್ಟಿತ್ತು. ಇದನ್ನು ಸುಧಾರಿಸಲು ಎತ್ತಿನ ಹೊಳೆ ಯೋಜನೆ ಸಿದ್ಧಪಡಿಸಲಾಗಿತ್ತು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net