ಆದ್ಯತೆ ಮೇರೆಗೆ ಗೃಹಲಕ್ಷ್ಮಿ ಹಣ ಬಿಡುಗಡೆ

ಕೊಟ್ಟೂರು ತಾಪಂ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಹೊಸಮನಿ ಅನಿಲ್, ತಾಪಂ ಇಒ ಡಾ.ಬಿ.ಆನಂದಕುಮಾರ್ ಇದ್ದರು.
ಕೊಟ್ಟೂರು ತಾಪಂ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಹೊಸಮನಿ ಅನಿಲ್, ತಾಪಂ ಇಒ ಡಾ.ಬಿ.ಆನಂದಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ
  • ಸಿಡಿಪಿಒ ಮಾಲುಂಬಿ ಹೇಳಿಕೆ

ಕೊಟ್ಟೂರು: ಗೃಹಲಕ್ಷ್ಮಿ ಯೋಜನೆಯ ಏಪ್ರಿಲ್ ಮತ್ತು ಮೇ ತಿಂಗಳ ಬಾಕಿ ಹಣವನ್ನು ಆದ್ಯತೆ ಮೇರೆಗೆ ಬಿಡುಗಡೆ ಮಾಡಲಾಗುವುದು ಎಂದು ಸಿಡಿಪಿಒ ಮಾಲುಂಬಿ ಹೇಳಿದರು.

ತಾಪಂ ಸಭಾಂಗಣದಲ್ಲಿ ಗುರುವಾರ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಮರಣ ಹೊಂದಿದ ಫಲಾನುಭವಿಗಳನ್ನು ಪತ್ತೆ ಮಾಡಿ ಗೃಹಲಕ್ಷ್ಮಿ ಹಣ ಅವರ ಖಾತೆಗೆ ಹೋಗದಂತೆ ಕ್ರಮವಹಿಸಲಾಗುತ್ತಿದೆ ಎಂದರು.
ಆಹಾರ ನಿರೀಕ್ಷಕಿ ಕಮಲಮ್ಮ ಗುಡ್ಡಾಪುರ ಮಾತನಾಡಿ, ನ್ಯಾಯಬೆಲೆ ಅಂಗಡಿ ಮುಂದೆ ಸಮಯದ ಬೋರ್ಡ್ ಅಳವಡಿಸಲಾಗಿದೆ. ಇನ್ನೂ ಹೆಚ್ಷಿನ ಸಂಖ್ಯೆಯಲ್ಲಿ ಇ ಕೆವೈಸಿ ಬಾಕಿ ಇದ್ದು, ಈ ಬಗ್ಗೆ ಪ್ರಚಾರ ಕೈಗೊಳ್ಳಲಾಗುತ್ತಿದೆ ಎಂದರು.
ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಹೊಸಮನಿ ಅನಿಲ್ ಮಾತನಾಡಿ, ಎಲ್ಲ ನ್ಯಾಯಬೆಲೆ ಅಂಗಡಿ ಮುಂದೆ ಸಿಎಂ, ಡಿಸಿಎಂ ಹಾಗೂ ಉಸ್ತುವಾರಿ ಸಚಿವರ ಬ್ಯಾನರ್ ಅಳವಡಿಸುವಂತೆ ಸೂಚಿಸಿ. ತಾಲೂಕಿನಲ್ಲಿ ಕಾಳಸಂತೆಯಲ್ಲಿ ಅಕ್ಕಿ ಕೊಳ್ಳುವವರ ಸಂಖ್ಯೆ ಹೆಚ್ಚಿದ್ದು, ಕಡಿವಾಣ ಹಾಕುವಂತೆ ತಿಳಿಸಿದರು. ಹೊಸಪೇಟೆ ಮಾರ್ಗದ ಹಳ್ಳಿಗಳಿಗೆ ಸರಿಯಾಗಿ ಬಸ್ ಬಿಡುತ್ತಿಲ್ಲ. ಈ ಬಗ್ಗೆ ಕ್ರಮ ವಹಿಸುವಂತೆ ಸದಸ್ಯರು ಒತ್ತಾಯಿಸಿದರು. ಸಾರಿಗೆ ಇಲಾಖೆ ಮೇಲ್ವಿಚಾರಣಾಧಿಕಾರಿ ಎಚ್.ಕೆ.ವಿಶ್ವನಾಥ್ ಬಸ್ ಬಿಡಲು ಕ್ರಮವಹಿಸುವುದಾಗಿ ತಿಳಿಸಿದರು.
ಜೆಸ್ಕಾಂ ಎಇಇ ಆರ್.ನಾಗರಾಜ್ ಮಾತನಾಡಿ, ಗೃಹಜ್ಯೋತಿ ಯೋಜನೆಗೆ ಹಳೇ ಅಪ್ಲಿಕೇಷನ್‌ನಲ್ಲಿಯೇ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು. ಹಳ್ಳಿಗಳಲ್ಲಿ ವಿದ್ಯುತ್ ತಂತಿಗಳಿಗೆ ಕೊಂಡಿ ಹಾಕುವುದನ್ನು ತಪ್ಪಿಸಲು ಕ್ರಮವಹಿಸಬೇಕು. ತಾಲೂಕಿನಲ್ಲಿ ಪ್ರತಿ ಹಳ್ಳಿಗೂ 150-200 ಕಂಬಗಳನ್ನು ಹಾಕಲಾಗಿದೆ. ಬಾಕಿ ಇದ್ದರೆ ಅಥವಾ ಅಗತ್ಯವಿದ್ದರೆ ತಿಳಿಸಿ ತಕ್ಷಣ ಹಾಕಲಾಗುವುದು ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಆನಂದ ಕುಮಾರ, ಗ್ಯಾರಂಟಿ ಸಮಿತಿ ಸದಸ್ಯರಾದ ಪ್ರಭುದೇವ, ಎನ್.ಚಂದ್ರಪ್ಪ, ಮಾರಪ್ಪ, ಎ.ಎಸ್.ಗಾಯತ್ರಿ, ಪಿ.ಕೆ.ಇಂದ್ರಜಿತ್, ಮಾಲ್ವಿ ಜಮೀರ್ ಖಾನ್, ಉಮಾಪತಿ ಎಂ.ಎಂ.ಸ್ವಾಮಿ, ಹರೀಶ್ ನಾಯ್ಕ, ಟಿ.ನಾಗಪ್ಪ, ಬಿ.ಬಸವರಾಜ್, ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net