ಗ್ರಾಮದ ಈರಮ್ಮ (58) ಮೃತ. ಆಸ್ತಿ ವಿಚಾರಕ್ಕೆ ಮಹಿಳೆಯನ್ನು ಹರಿತವಾದ ಸಾಧನಗಳಿಂದ ಇರಿದು, ಬಳಿಕ ಪೆಟ್ರೋಲ್ ಸುರಿದು ಸುಡಲಾಗಿದೆ. ಗ್ಯಾಸ್ ಸ್ಪೋಟ ಎಂಬಂತೆ ಬಿಂಬಿಸುವ ಪ್ರಯತ್ನ ಈ ಪ್ರಕರಣದಲ್ಲಿ ನಡೆದಿತ್ತು. ಆದರೆ, ಮಹಿಳೆಯ ಮರಣೋತ್ತರ ಪರೀಕ್ಷೆಯಲ್ಲಿ ಸಂಗತಿ ಬಯಲಾಗಿದೆ. ಮೊಮ್ಮಗ ವೀರೇಂದ್ರ ಎಂಬಾತ ಮೊದಲಿಗೆ ಮಹಿಳೆಯನ್ನು ಇರಿದು ಕೊಂದ ಬಳಿಕ ಸುಟ್ಟಿರುವುದು ಎಂಬುದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ. ಇನ್ನಿಬ್ಬರು ಕೃತ್ಯದಲ್ಲಿ ಸಹಕಾರ ನೀಡಿದ್ದು ವಶಕ್ಕೆ ಪಡೆಯಲಾಗುವುದು ಎಂದು ಎಸ್ಪಿ ಡಾ.ಸುಮನ್ ಡಿ. ಪನ್ನೇಕರ್ ತಿಳಿಸಿದರು.