ಶಾಲಾ ನಿರ್ಮಾಣದ ವೇಳೆಯ ಆವರಣದಲ್ಲಿ ಕುಡಿವ ನೀರಿನ ಟ್ಯಾಂಕರ್ ನಿರ್ಮಿಸಿ ಹಲವು ವರ್ಷಗಳೇ ಕಳೆದಿವೆ. ಆದರೆ, ಈವರೆಗೆ ನೀರಿನ ಪೈಪ್‌ಗಳ ಸಂಪರ್ಕ ಅಳವಡಿಸಿಲ್ಲ. ಆದ್ದರಿಂದ, ಶಾಲಾ ಶಿಕ್ಷಕರು ಮಕ್ಕಳಿಗೆ ಮನೆಯಿಂದ ಬಾಟಲ್‌ನಲ್ಲಿ ನೀರು ತರಬೇಕಿದೆ. ಪ್ಲಾಸ್ಟಿಕ್ ಬಾಟಲ್ ಬಳಸುತ್ತಿದ್ದಾರೆ. ಗಂಡು ಹಾಗೂ ಹೆಣ್ಣುಮಕ್ಕಳಿಗೆ ಪ್ರತ್ಯೇಕವಾದ ಶೌಚಾಲಯ ನಿರ್ಮಿಸಿದ್ದೂ ನೀರಿನ ಸಂಪರ್ಕಯಿಲ್ಲದೆ ದುರ್ವಾಸನೆ ಬೀರುತ್ತಿವೆ. ಅಲ್ಲದೆ, ಶೌಚಾಲಯಕ್ಕೆ ಅಳವಡಿಸಿರುವ ಸಲಕರಣೆಗಳು ಕಳವುಯಾಗಿವೆ. ಶಾಲೆಗೆ ಸೂಕ್ತವಾದ ಕೌಂಪೌಂಡ್ ವ್ಯವಸ್ಥೆಯಿಲ್ಲದೆ ಇರುವುದರಿಂದ ಶಾಲಾ ಸುತ್ತಲೂ ಗ್ರಾಮದ ತ್ಯಾಜ್ಯವೆಲ್ಲ ತಂದು ಹಾಕುತ್ತಿರುವುದರಿಂದ ಸ್ವಚ್ಛತೆ ಮರೀಚಿಕೆಯಾಗಿದೆ. ಈ ಬಗ್ಗೆ ಶಾಲಾ ಶಿಕ್ಷಕರು ಹಾಗೂ ಶಾಲೆಗೆ ಭೂ ದಾನಿಗಳು ಪಿಡಿಒ, ಡಿಡಿಪಿಐ ಹಾಗೂ ಶಾಸಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಲಾ ಮೈದಾನದಲ್ಲಿ ಮಧ್ಯಾಹ್ನದ ಊಟ ಹಾಗೂ ಅಂಗನವಾಡಿ ತರಬೇತಿ ಕೇಂದ್ರವಿದೆ. ಆದರೆ, ರಾತ್ರಿ ವೇಳೆಯಲ್ಲಿ ಕುಡುಕರ ಹಾವಳಿ ಹೆಚ್ಚಿದೆ. ಐದು ಕೊಠಡಿಗಳ ಪೈಕಿ ಮೂರು ಸಂಪೂರ್ಣ ಹಾಳಾಗಿದ್ದು, ಕೆಲವೂ ಛಾವಣಿ ಮತ್ತು ಪಿಲ್ಲರ್ ಕಾಂಕ್ರಿಟ್ ಪದರು ಕಿತ್ತು ಹೋಗಿವೆ.