ರಕ್ತದಾನದಿಂದ ಉತ್ತಮ ಆರೋಗ್ಯ

ಕುರುಗೋಡು ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸಮುದಾಯ ಆರೋಗ್ಯ ಕೇಂದ್ರದಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು. ದೇವಸ್ಥಾನ ಸಮಿತಿ ಗೌರವ ಅಧ್ಯಕ್ಷ ನಾಗೇಶ್ವರರಾವ್, ಅಧ್ಯಕ್ಷ ವೀರಭದ್ರರಾವ್ ಸದಸ್ಯರಾದ ವೆಂಕಟೇಶ್ ರಾವ್, ಶ್ರೀನಿವಾಸ್ ರಾವ್ ಇತರರಿದ್ದರು.
ಕುರುಗೋಡು ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸಮುದಾಯ ಆರೋಗ್ಯ ಕೇಂದ್ರದಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು. ದೇವಸ್ಥಾನ ಸಮಿತಿ ಗೌರವ ಅಧ್ಯಕ್ಷ ನಾಗೇಶ್ವರರಾವ್, ಅಧ್ಯಕ್ಷ ವೀರಭದ್ರರಾವ್ ಸದಸ್ಯರಾದ ವೆಂಕಟೇಶ್ ರಾವ್, ಶ್ರೀನಿವಾಸ್ ರಾವ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಯಿಬಾಬಾ ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ನಾಗೇಶ್ವರರಾವ್
  • ಕುರುಗೋಡು ಸ್ವಯಂಪ್ರೇರಿತ ರಕ್ತದಾನ ಶಿಬಿರ
ಕುರುಗೋಡು: ರಕ್ತದಾನದಿಂದ ರಕ್ತದೊತ್ತಡ, ಮಧುಮೇಹದಂತಹ ರೋಗಗಳು ನಿಯಂತ್ರಣಕ್ಕೆ ಬರುವುದರ ಜತೆಗೆ ಆತ್ಮತೃಪ್ತಿ ಸಿಗುತ್ತದೆ ಎಂದು ಶಿರಡಿ ಸಾಯಿಬಾಬಾ ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ನಾಗೇಶ್ವರರಾವ್ ಹೇಳಿದರು.
ಗುರುಪೂರ್ಣಿಮೆ ಪ್ರಯುಕ್ತ ಶಿರಿಡಿ ಸಾಯಿಬಾಬಾ ಮಂದಿರದಲ್ಲಿ ಸಮುದಾಯ ಆರೋಗ್ಯ ಕೇಂದ್ರದಿಂದ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೇಶದಲ್ಲಿ ಪ್ರತಿವರ್ಷ 41 ದಶಲಕ್ಷ ಯೂನಿಟ್ ರಕ್ತದ ಕೊರತೆ ಎದುರಾಗುತ್ತಿದೆ. ಸಕಾಲಕ್ಕೆ ರಕ್ತ ಸಿಗದೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು, ಅಪಘಾತದ ಗಾಯಾಳುಗಳು ಮೃತಪಡುತ್ತಿದ್ದಾರೆ. ಅಮೂಲ್ಯವಾದ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅಗತ್ಯವಾಗಿದ್ದು, ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು.
ಶಿಬಿರದಲ್ಲಿ 123 ಹೆಚ್ಚು ಜನರು ರಕ್ತದಾನ ಮಾಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ವೀರಭದ್ರರಾವ್, ಸದಸ್ಯರಾದ ರಮೇಶ್, ಈಶ್ವರರಾವ್, ಪ್ರವೀಣ್ ಕುಮಾರ್, ಬಾಬುರಾಜ, ಪ್ರಸಾದ್, ಮುಖಂಡರಾದ ಚಾನಾಳ್ ಆನಂದ್, ಮಂಜುನಾಥ, ನರೇಶ, ಸಂತೋಷ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net