ಹರಪನಹಳ್ಳಿ: ನಗರದ ಕಾಶಿ ಸಂಗಮೇಶ್ವರ ಬಡಾವಣೆಯಲ್ಲಿ ಗುರುವಾರ ಮನೆ ಬೀಗ ಮುರಿದು ರೂ. 16.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಲಾಗಿದೆ.
ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ನಿವಾಸದ ಸಮೀಪವಿರುವ ಎಚ್.ಸಿದ್ದೇಶ್ ಅವರ ಮನೆಯಲ್ಲಿ ಕಳ್ಳತನ ಆಗಿದೆ. ಶಾಸಕಿ ಮನೆಯ ಕಾಂಪೌಂಡ್ ಹಾರಿ ಅವರ ಆವರಣದಲ್ಲಿ ಓಡಾಡಿರುವ ಮುಸುಕುಧಾರಿ ಕಳ್ಳರು ನಂತರ ಸಿದ್ದೇಶ ಮನೆ ಕಡೆಗೆ ಹೋಗಿರುವ ದೃಶ್ಯಗಳು ಶಾಸಕರ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ನಮ್ಮ ಮನೆಯ ಹತ್ತಿರವೇ ಕಳ್ಳತನ ನಡೆದಿರುವುದು ಆತಂಕಕಾರಿಯಾಗಿದೆ, ತಕ್ಷಣ ಕಾರ್ಯಾ ಚರಣೆ ನಡೆಸಿ ಕಳ್ಳರನ್ನು ಪತ್ತೆ ಹಚ್ಚುವಂತೆ ಪೊಲೀಸ್ ಅಧಿಕಾರಿಗಳಿಗೆ ಶಾಸಕಿ ಲತಾ ಮಲ್ಲಿಕಾರ್ಜುನ್ ಸೂಚಿಸಿದ್ದಾರೆ. ಈ ಹಿಂದೆ ಶಾಸಕರ ಕಚೇರಿಯಲ್ಲಿ ಕಳ್ಳತನ ನಡೆದಿತ್ತು.