ಮಕ್ಕಳಿಗೆ ಸೂಕ್ತ ಪ್ರೋತ್ಸಾಹ ನೀಡಿ

ಸಂಡೂರು ತಾಲೂಕು ಜೆಎಸ್‌ಡಬ್ಲ್ಯು ಫೌಂಡೇಶನ್ ತೋರಣಗಲ್ ಓಪಿಜೆ ತಮನ್ನಾ ವಿಶೇಷ ಮಕ್ಕಳ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನ ಕಾರ್ಯಕ್ರಮದಲ್ಲಿ ಮಕ್ಕಳು ಭಕ್ತ ಪ್ರಹ್ಲಾದ ನಾಟಕ ಪ್ರದರ್ಶಿಸಿದರು.
ಸಂಡೂರು ತಾಲೂಕು ಜೆಎಸ್‌ಡಬ್ಲ್ಯು ಫೌಂಡೇಶನ್ ತೋರಣಗಲ್ ಓಪಿಜೆ ತಮನ್ನಾ ವಿಶೇಷ ಮಕ್ಕಳ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನ ಕಾರ್ಯಕ್ರಮದಲ್ಲಿ ಮಕ್ಕಳು ಭಕ್ತ ಪ್ರಹ್ಲಾದ ನಾಟಕ ಪ್ರದರ್ಶಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಅಂಗವಿಕಲ
  • ದಿನಾಚರಣೆ

ಮಕ್ಕಳಿಗೆ ಸೂಕ್ತ ಪ್ರೋತ್ಸಾಹ ನೀಡಿ

ಸಂಡೂರು: ಅಂಗವಿಕಲ ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಪಾಲಕರ ಸಹಕಾರದ ಮಹತ್ವದ್ದಾಗಿದೆ. ಮಕ್ಕಳ ಅಗತ್ಯಗಳ ಅನುಗುಣವಾಗಿ ಬೆಂಬಲ ನೀಡಬೇಕು ಎಂದು ಜೆಎಸ್‌ಡಬ್ಲ್ಯು ಸ್ಟೀಲ್ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ ಸುನಿಲ್ ರಾಲ್ಫ್ ಹೇಳಿದರು.
ಜೆಎಸ್‌ಡಬ್ಲ್ಯು ಫೌಂಡೇಷನ್ ತೋರಣಗಲ್ ಓಪಿಜೆ ತಮನ್ನಾ ವಿಶೇಷ ಮಕ್ಕಳ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಗವೈಕಲ್ಯ ಸಾಮಾಜಿಕ ಕಳಂಕ ಅಥವಾ ಮೌಢ್ಯತೆಯಿಂದ ಕೂಡಿರುವುದಿಲ್ಲ. ಮಕ್ಕಳಿಗೆ ಸೂಕ್ತ ಆರೈಕೆ ಮತ್ತು ಪ್ರೋತ್ಸಾಹ ನೀಡಬೇಕು. ತಮನ್ನಾ ಶಾಲೆ ಮಕ್ಕಳೀಗೆ ಜೀವನದ ಕೌಶಲ ಮತ್ತು ದಿನನಿತ್ಯದ ಅಭ್ಯಾಸಗಳಲ್ಲಿ ತೊಡಗಿಸುವ ಮೂಲಕ ಬೆಂಬಲ ನೀಡುತ್ತಿದ್ದೇವೆ ಎಂದರು.
ಪ್ರಾಚಾರ್ಯೆ ಎನ್.ಸವಿತಾ ಮಾತನಾಡಿ, ಶಾಲೆಯಲ್ಲಿ ಅಗತ್ಯ ಸೌಲಭ್ಯ, ತರಬೇತಿ ಕಾರ್ಯಕ್ರಮಗಳು ಮತ್ತು ಸಹಾಯಕ ಅಧ್ಯಯನ ವಾತಾವರಣವಿದೆ. ಮಕ್ಕಳಿಗೆ ಪೂರ್ಣ ಗೌರವ, ಸಕಾಲಿಕ ಸಹಾಯ ಮತ್ತು ಪ್ರೋತ್ಸಾಹ ನೀಡುವುದು, ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಸುವುದು ಉದ್ದೇಶವಾಗಿದೆ. ಅಂಗವಿಕಲ ಮಕ್ಕಳು ಭಕ್ತ ಪ್ರಹ್ಲಾದ ಪೌರಾಣಿಕ ನಾಟಕ ಪ್ರದರ್ಶಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net