ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಯುವಕರಿಗೆ ಸಚಿವ ಸ್ಥಾನ ನೀಡಿದರೆ ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬಲಿದ್ದಾರೆ. ಸದ್ಯದಲ್ಲೇ ದೆಹಲಿಗೆ ತೆರಳಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದೇವೆ. ಹೈಕಮಾಂಡ್ ನಮ್ಮ ಕುಟುಂಬವಿದ್ದಂತೆ, ಬೇಡಿಕೆಗಳನ್ನು ಕುಟುಂಬದ ಮುಂದೆ ಇಡುವುದರಲ್ಲಿ ತಪ್ಪೇನಿಲ್ಲ. ಅಧಿವೇಶನ ಮುಗಿಯುವುದರೊಳಗೆ ನಾಯಕರನ್ನು ಭೇಟಿ ಮಾಡಲು ಸಮಯ ಕೇಳಿದ್ದೇವೆ. ಸಂಪುಟ ವಿಸ್ತರಣೆಯಾದರೆ ಅರ್ಹ ಯುವ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗುವುದು. ಪಕ್ಷದ ಪರವಾಗಿಯೇ ಸಭೆ ಮಾಡಿದ್ದೇವೆ. ಯುವಕರಿಗೆ ಅವಕಾಶ ನೀಡಿದರೆ ಸರ್ಕಾರದ ಆಡಳಿತಕ್ಕೆ ಹೊಸ ವೇಗ ಸಿಗಲಿದೆ ಎಂಬುದು ಆಶಯ ಎಂದರು.