ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ ನೀಡಿ Ayyappaswami

ರಾಮಸಾಗರದಲ್ಲಿ ಪ್ರತಿಷ್ಠಾಪನೆಗೊಂಡ ಅಯ್ಯಪ್ಪಸ್ವಾಮಿ ಮೂರ್ತಿ.
ರಾಮಸಾಗರದಲ್ಲಿ ಪ್ರತಿಷ್ಠಾಪನೆಗೊಂಡ ಅಯ್ಯಪ್ಪಸ್ವಾಮಿ ಮೂರ್ತಿ.
Published on

ಪ್ರಮುಖ ಮುಖ್ಯಾಂಶಗಳು

  • ಬುಕ್ಕಸಾಗರದ ಕರಿಸಿದ್ಧೇಶ್ವರ ಸಂಸ್ಥಾನಮಠದ ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿಕೆ
  • ರಾಮಸಾಗರದಲ್ಲಿ ಶ್ರೀಗಣೇಶ, ಸುಬ್ರಹ್ಮಣ್ಯಸ್ವಾಮಿ, ಅಯ್ಯಪ್ಪಸ್ವಾಮಿ ಮೂರ್ತಿ ಪ್ರಾಣಪ್ರತಿಷ್ಠಾಪನೆ
ಕಂಪ್ಲಿ: ಅಯ್ಯಪ್ಪಸ್ವಾಮಿ ವ್ರತಧಾರಿಗಳ ಸಂಕಲ್ಪ ನಿಷ್ಠೆ ಜೀವನಪೂರ್ತಿ ಅಳವಡಿಸಿಕೊಂಡಲ್ಲಿ ಸಾರ್ಥಕ ಜೀವನ ಸಾಗಿಸಲು ಸಾಧ್ಯ ಎಂದು ಬುಕ್ಕಸಾಗರದ ಕರಿಸಿದ್ಧೇಶ್ವರ ಸಂಸ್ಥಾನಮಠದ ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.
ರಾಮಸಾಗರದಲ್ಲಿ ಶ್ರೀಗಣೇಶ, ಸುಬ್ರಹ್ಮಣ್ಯಸ್ವಾಮಿ, ಅಯ್ಯಪ್ಪಸ್ವಾಮಿ ಮೂರ್ತಿಗೆ ಸೋಮವಾರ ಬ್ರಾಹ್ಮಿ ಮುಹೂರ್ತದಲ್ಲಿ ಪ್ರಾಣಪ್ರತಿಷ್ಠಾಪನೆಗೊಳಿಸಿ ಮಾತನಾಡಿ, ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ ನೀಡುವಲ್ಲಿ ಪಾಲಕರು ಜಾಗ್ರತೆ ತೋರಬೇಕೆಂದರು. ಪ್ರಾಣಪ್ರತಿಷ್ಠಾಪನಾರ್ಥ ಅಭಿಷೇಕ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಗ್ರಾಪಂ ಅಧ್ಯಕ್ಷೆ ಆಶಾ, ಪಿಡಿಒ ಮಲ್ಲಿಕಾರ್ಜುನ, ಶ್ರೀಅಯ್ಯಪ್ಪಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಬೋವೇರ್ ನಾರಾಯಣ, ಪದಾಧಿಕಾರಿಗಳಾದ ಬಾರಕೀರ್ ಶಿವಪ್ಪ, ಪೋಸ್ಟ್ ಶಿವಪ್ಪ, ಜಗನ್ನಾಥಗೌಡ್ರು, ಬೋವೇರ್ ಮಂಜುನಾಥ, ಎಚ್.ಅಮರೇಶ, ಅಯ್ಯಣ್ಣ, ಬಿಚ್ಚಳ್ಳಿ ವೀರಭದ್ರಪ್ಪ, ಕಂಪ್ಲಿ ಎರ‌್ರಿಸ್ವಾಮಿ, ವಿಜಯಭಾಸ್ಕರ್, ಪಲ್ಲೇದ ಮಂಜುನಾಥ, ಸತ್ಯನಾರಾಯಣ, ಕಿರಣಶೆಟ್ಟಿ, ಪ್ರಮುಖ ಎಚ್.ಶಿವಶಂಕರಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net