ಬಳ್ಳಾರಿ ; ಸಂಡೂರು ತಾಲೂಕಿನ ಲಿಂಗದಹಳ್ಳಿ ಬಳಿ ವೇಗವಾಗಿ ಚಲಿಸುವ ಆಟೋದಿಂದ ಬಾಲಕಿ ಬಿದ್ದು ಮೃತಪಟ್ಟ ಘಟನೆ ಈಚೆಗೆ ನಡೆದಿದೆ. ತಾಲೂಕಿನ ಎಸ್.ಬಸಾಪುರ ಗ್ರಾಮದ ರೇಣುಕಾ (5)ಮೃತ. ಕುಟುಂಬದವರೊಂದಿಗೆ ಸೇರಿ ವೈಯಕ್ತಿಕ ಕಾರ್ಯಕ್ರಮ ಮುಗಿಸಿಕೊಂಡು ನಾಗಲಾಪುರದಿಂದ ಬಸಾಪುರ ಗ್ರಾಮಕ್ಕೆ ಆಟೋದಲ್ಲಿ ತೆರಳುತ್ತಿದ್ದ ವೇಳೆ ಬಾಲಕಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈ ಕುರಿತು ಮೃತಳ ಅಜ್ಜನ ದೂರಿನ ಮೇರೆಗೆ ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.