ಜ್ಞಾನಾರ್ಜನೆಯಿಂದ ಜೀವನದಲ್ಲಿ ಮುಂದೆ ಬನ್ನಿ

ಸಂಡೂರಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ನಡೆಯಿತು.
ಸಂಡೂರಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • library programme
ಸಂಡೂರು: ಶಾಲಾ ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳು ಸಾರ್ವಜನಿಕ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದಿ ಜ್ಞಾನಾರ್ಜನೆ ಮಾಡಿಕೊಂಡು ಜೀವನದಲ್ಲಿ ಮುಂದೆ ಬರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್.ಅಕ್ಕಿ ಹೇಳಿದರು.
ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಬಿ.ವಿಜಯಕುಮಾರ್ ಗೌಡ ಮಾತನಾಡಿ, ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಇ-ಗ್ರಂಥಾಲಯದಲ್ಲಿ ಪರೀಕ್ಷೆ ತಯಾರಿಗೆ ಬೇಕಾದ ಎಲ್ಲ ರೀತಿಯ ಪುಸ್ತಕಗಳು ದೊರೆಯುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಅನಿಲ್ ಕುಮಾರ್ ಮಾತನಾಡಿ, ಜ್ಞಾನ ಎನ್ನುವುದು ಬತ್ತದ ಕಣಜವಿದ್ದಂತೆ. ಓದಿದಷ್ಟು ಹಾಗೂ ಬರೆದಷ್ಟು ಹೆಚ್ಚುತ್ತದೆ. ಗುರುಕುಲ ಪದ್ಧತಿಯಲ್ಲಿದ್ದಂತಹ ಗಟ್ಟಿ ಓದು ಈಗಿಲ್ಲ ಎಂದರು.
ನಿವೃತ್ತ ಉಪನ್ಯಾಸಕ ಸಿ.ಎಂ.ಶಿಗ್ಗಾಂವಿ, ಕ್ಷೇತ್ರ ಸಮನ್ವಯಾಧಿಕಾರಿ ಶರಣಬಸಪ್ಪ ಕರಿಶೆಟ್ಟಿ, ಬಿಆರ್‌ಸಿ ಮಂಜುನಾಥ್ ಹಾದಿಮನಿ, ಶಾಖಾ ಗ್ರಂಥಾಧಿಕಾರಿ ಮಲ್ಲಪ್ಪ ಗುಡ್ಲಾನೂರು, ಗ್ರಂಥಪಾಲಕ ಎಚ್.ವೀರೇಶ್, ಗ್ರಂಥಾಲಯ ಸಿಬ್ಬಂದಿ ಕೆ.ರಮಾನಂದ, ಕವಾಟಿ ಮಂಜಪ್ಪ ಇದ್ದರು.
ಕಾರ್ಯಕ್ರಮದ ನಂತರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು. ಛತ್ರಪತಿ ಶಾಲೆಯ ವಿದ್ಯಾರ್ಥಿಗಳು ಪ್ರಥಮ, ಎಸ್‌ಇಎಸ್ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಮತ್ತು ಆದರ್ಶ ಪ್ರೌಢಶಾಲೆಯ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದರು. ಶಿಕ್ಷಕರಾದ ನಾಯಕರ ಮಾರೇಶ, ಅಂಬಿಕಾ, ಕೆ.ನಾಗರಾಜ್, ಗೋಪಿ ನಾಯ್ಕ ರಸಪ್ರಶ್ನೆ ಸ್ಪರ್ಧೆ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net