ಕಳೆದ ಎರಡ್ಮೂರು ದಿನದಿಂದ ಎಲ್‌ಪಿಜಿ ತುಂಬಿಸಿಕೊಳ್ಳಲು ಚಾಲಕರು ಊಟ, ತಿಂಡಿ, ನೀರು ಬಿಟ್ಟು ಬಿಸಿಲಿನಲ್ಲಿ ತಮ್ಮ ಆಟೋಗಳನ್ನು ಕಿ.ಮೀ. ಗಟ್ಟಲೇ ದೂರದವರೆಗೆ ಸರತಿ ಸಾಲಿನಲ್ಲಿ ನಿಲ್ಲಿಸಿಕೊಂಡು ಕಾಯುತ್ತಿದ್ದರು. ಆದರೆ, ಕೆಲ ದಿನಗಳಿಂದ ಆರೇಳು ಗಂಟೆ ಕಾದರೂ ಕೆಲವರಿಗೆ ಗ್ಯಾಸ್ ಸಿಕ್ಕಿಲ್ಲ. ಹೀಗಾಗಿ ಅವರ ಅದಾಯಕ್ಕೆ ಹೊಡೆತ ಬಿದ್ದಿದೆ. ಕೆಲವರು ಗ್ಯಾಸ್ ತುಂಬಿಸಲು ಏಜೆನ್ಸಿಗಳ ಮಾಲೀಕರ ಜತೆ ವಾದ ನಡೆದ ಘಟನೆಗಳು ನಡೆದಿವೆ. ಇನ್ನೂ ಅಂದ್ರಾಳ್, ರೂಪನಗುಡಿ ರಸ್ತೆಯಲ್ಲಿ ಸಿಎನ್‌ಜಿ ಬಂಕ್‌ಯಿವೆ. ನಗರದಲ್ಲಿ ಸಿಎನ್‌ಜಿ ಆಟೋಗಳ ಸಂಚಾರ ಸಾಮಾನ್ಯವಾಗಿದ್ದು, ಸಿಎನ್‌ಜಿ ಕೊರತೆಯಿಲ್ಲ.