ಶೇ. 90ರಷ್ಟು ಗ್ಯಾಸ್ ಬಳಕೆ : ಜಿಲ್ಲೆಯಲ್ಲಿ ಕಳೆದ ಒಂದು ದಶಕದ ಹಿಂದಿನವರೆಗೂ ಬಹುತೇಕ ಹೋಟೆಲ್‌ಗಳು ನೆಲ್ಲು, ಶೇಂಗಾ ಹೊಟ್ಟು, ಕಟ್ಟಿಗೆ ಸೌದೆಗಳನ್ನು ಬಳಸುತ್ತಿದ್ದವು. ಆಗ ಪ್ರತಿ ತಿಂಗಳು ಇಂತಿಷ್ಟು ಅನಿಲಗಳನ್ನು ಪೂರೈಕೆ ಮಾಡಲಾಗುತ್ತಿತ್ತು. ಪರಿಣಾಮ ಕೆಲವೊಂದು ಹೋಟೆಲ್‌ಗಳು ಗೃಹಬಳಕೆ ಅನಿಲಗಳನ್ನು ಕದ್ದುಮುಚ್ಚಿ ಬಳಸುತ್ತಿದ್ದವು. ಆದರೆ, ಕಳೆದ ಐದಾರು ವರ್ಷಗಳ ಹಿಂದೆ ಹೋಟೆಲ್ ಉದ್ಯಮಗಳಿಗೆ ವಾಣಿಜ್ಯ ಅನಿಲ (ಗ್ಯಾಸ್‌ಗಳು) ಮುಕ್ತವಾಗಿ ಪೂರೈಕೆಯಾಗುತ್ತಿವೆ. ತಿಂಗಳಿಗೆ ಇಂತಿಷ್ಟು ಎಂಬ ನಿರ್ಬಂಧವಿಲ್ಲ. ಟ್ರೇಡರ್‌ಗಳಿಗೆ ದೂರವಾಣಿ ಮೂಲಕ ತಿಳಿಸಿದರೆ ಸಾಕು ತಂದು ಸಿಲಿಂಡರ್‌ಗಳ ಇಳಿಸಿ ಹೋಗುತ್ತಾರೆ. ಹೀಗಾಗಿ ಸದ್ಯ, ಇರುವ ಶೇ.90 ರಷ್ಟು ಹೋಟೆಲ್‌ಗಳು ಹೊಟ್ಟು , ಕಟ್ಟಿಗೆ ಸೌದೆಗಳನ್ನು ಬಿಟ್ಟು ಸಿಲಿಂಡರ್‌ಗಳನ್ನು ಅವಲಿಂಬಿಸಿವೆ. ಇದೀಗ ಇರಾನ್ - ಇಸ್ರೇಲ್ ಯುದ್ದದಿಂದಾಗಿ ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ಕೊರೆತೆಯಾದರೆ ಹೋಟೆಲ್ ಉದ್ಯಮಕ್ಕೆ ಭಾರಿ ಪೆಟ್ಟು ಬೀಳುವ ಸಾಧ್ಯತೆಯಿದೆ.