ಗಾಂಧಿಜೀ ಅಹಿಂಸೆ ತತ್ವಗಳು ಜಗತ್ತಿಗೆ ಮಾದರಿ

ಕಂಪ್ಲಿಯಲ್ಲಿ ತಹಸೀಲ್ದಾರ್ ಜೂಗಲ ಮಂಜುನಾಯಕ ಪೊಲೀಸ್ ಧ್ವಜ ವಂದನೆ ಸ್ವೀಕರಿಸಿದರು. ಆರಕ್ಷಕ ನಿರೀಕ್ಷಕ ಕೆ.ಬಿ.ವಾಸುಕುಮಾರ್, ಪ್ರಮುಖರಾದ ಕೆ.ಶ್ರೀನಿವಾಸರಾವ್, ಎನ್.ಹಬೀಬ್‌ರೆಹಮಾನ್ ಇತರರಿದ್ದರು.
ಕಂಪ್ಲಿಯಲ್ಲಿ ತಹಸೀಲ್ದಾರ್ ಜೂಗಲ ಮಂಜುನಾಯಕ ಪೊಲೀಸ್ ಧ್ವಜ ವಂದನೆ ಸ್ವೀಕರಿಸಿದರು. ಆರಕ್ಷಕ ನಿರೀಕ್ಷಕ ಕೆ.ಬಿ.ವಾಸುಕುಮಾರ್, ಪ್ರಮುಖರಾದ ಕೆ.ಶ್ರೀನಿವಾಸರಾವ್, ಎನ್.ಹಬೀಬ್‌ರೆಹಮಾನ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಜೂಗಲ ಮಂಜುನಾಯಕ ಅನಿಸಿಕೆ
  • ಸ್ವಾತಂತ್ರ್ಯೋತ್ಸವ

ಕಂಪ್ಲಿ: ಸ್ವಾತಂತ್ರ್ಯ ಒಂದು ಕ್ಷಣದ ಸಂಗತಿಯಾಗದೆ ಸದಾ ಜಾಗೃತವಾದ ಆಚರಣೆಯಾಗಲಿ ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.

ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಶನಿವಾರ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಾತ್ಮ ಗಾಂಧಿ ಅವರ ಸತ್ಯ, ಅಹಿಂಸೆ ತತ್ವಗಳು ಜಗತ್ತಿನ ಮಹತ್ವದ ಆದರ್ಶಗಳಾಗಿವೆ ಎಂದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್‌ರೆಹಮಾನ್, ಪ್ರಮುಖರಾದ ಆರ್.ಕೆ.ಶ್ರೀಕುಮಾರ್, ಕೆ.ಬಿ.ವಾಸುಕುಮಾರ್, ಬಿ.ಮಲ್ಲಿಕಾರ್ಜುನ, ಶ್ರೀನಿವಾಸ್, ನರಸಪ್ಪ, ಸಿದ್ದಣ್ಣ ಪರಮೇಶ್ವರ, ಡಾ.ಕೆ.ಯು.ಬಸವರಾಜ, ಟಿ.ಎಂ.ಬಸವರಾಜ, ಮುದುಕಪ್ಪ ನೆಲಜೇರಿ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net