ಗಾದಿಲಿಂಗೇಶ್ವರ ರಥೋತ್ಸವ ಅದ್ದೂರಿ

ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಗಾದಿಲಿಂಗೇಶ್ವರ ರಥೋತ್ಸವ ಜರುಗಿತು.
ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಗಾದಿಲಿಂಗೇಶ್ವರ ರಥೋತ್ಸವ ಜರುಗಿತು.
Published on
ಕುರುಗೋಡು: ಬಾದನಹಟ್ಟಿಯಲ್ಲಿ ಶ್ರೀ ಗಾದಿಲಿಂಗೇಶ್ವರ ಸ್ವಾಮಿ ರಥೋತ್ಸವ ಭಾನುವಾರ ಸಂಭ್ರಮದಿಂದ ಜರುಗಿತು.
ರಥೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜಾ ಕೈಂಕರ್ಯ ನಡೆದವು. ಸಿದ್ದಮ್ಮನಹಳ್ಳಿ, ಯರಿಂಗಳಿಗಿ, ವದ್ದಟ್ಟಿ, ಕಲ್ಲುಕಂಬ ಗ್ರಾಮಗಳ ಭಕ್ತರು ಬೆಳಗ್ಗೆಯಿಂದ ದೇವಸ್ಥಾನಕ್ಕೆ ಭೇಟಿ ನೀಡಿ ಗಾದಿಲಿಂಗೇಶ್ವರ ಸ್ವಾಮಿ ದರ್ಶನ ಪಡೆದು ಹೂ, ಹಣ್ಣು ಮತ್ತು ಕಾಯಿ ಸಮರ್ಪಿಸಿ ಭಕ್ತಿ ಮೆರೆದರು.
ಗ್ರಾಮದ ಕುರಿಗಳ ಹಿಂಡು ಹಟ್ಟಿ ಸೇರುತ್ತಿದ್ದಂತೆ ಗೋಧೂಳಿ ಸಮಯದಲ್ಲಿ ಅಲಂಕೃತ ರಥವನ್ನು ದೇವಸ್ಥಾನದ ಆವರಣದಿಂದ ಎದುರು ಬಸವಣ್ಣ ಕಟ್ಟೆವರೆಗೆ ಎಳೆದು ಸ್ವ ಸ್ಥಾನಕ್ಕೆ ತರಲಾಯಿತು. ಭಕ್ತರು ರಥಕ್ಕೆ ಬಾಳೆಹಣ್ಣು ಎಸೆದರು. ತಾಲೂಕಿನ ಹೊಸ ಗೆಣಿಕೆಹಾಳು, ಕುರುಗೋಡು, ಸೋಮಸಮುದ್ರ ಮತ್ತು ಏಳುಬೆಂಚಿ ಗ್ರಾಮದಲ್ಲೂ ಗಾದಿಲಿಂಗೇಶ್ವರ ರಥೋತ್ಸವ ಜರುಗಿದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net