ನಕಲಿ ಚಿನ್ನ ನೀಡಿ, 10 ಲಕ್ಷ ರೂ. ವಂಚನೆ

ನಕಲಿ ಚಿನ್ನ ನೀಡಿ, 10 ಲಕ್ಷ ರೂ. ವಂಚನೆ
ನಕಲಿ ಚಿನ್ನ ನೀಡಿ, 10 ಲಕ್ಷ ರೂ. ವಂಚನೆ
Published on

ಪ್ರಮುಖ ಮುಖ್ಯಾಂಶಗಳು

  • ನಕಲಿ
ಬಳ್ಳಾರಿ : ಹೈದರಾಬಾದ್ ಮೂಲದ ದಂಪತಿಗೆ ಉಡುಪಿ ಮೂಲದ ವ್ಯಕ್ತಿಯೊಬ್ಬ ಬಳ್ಳಾರಿಯಲ್ಲಿ ನಕಲಿ ಚಿನ್ನ ನೀಡಿ ಹತ್ತು ಲಕ್ಷ ರೂ. ಪಡೆದು ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಾ.5ರಂದು ಉಡುಪಿ ಮೂಲದ ರಮೇಶ್ ಎಂಬ ವ್ಯಕ್ತಿ ದಂಪತಿಗೆ ಕರೆ ಮಾಡಿ, ನಮ್ಮ ಹೊಲದಲ್ಲಿ ಬಂಗಾರದ ನಾಣ್ಯಗಳು ಸಿಕ್ಕಿವೆ ಅವುಗಳನ್ನು ಮಾರುತ್ತಿರುವುದಾಗಿ ದಂಪತಿಗೆ ಹೇಳಿದ್ದ. ಮೊದಲ ಅಸಲಿ ಬಂಗಾರ ನಾಣ್ಯ ನೀಡಿ ದಂಪತಿಗೆ ನಂಬಿಸಿದ್ದಾನೆ. ಮಾ.13ರಂದು ಬಳ್ಳಾರಿಯ ಮಂಗಮ್ಮ ಕ್ಯಾಂಪ್ ಬಳಿ 450 ನಾಣ್ಯಗಳನ್ನು ನೀಡಿ ಹತ್ತು ಲಕ್ಷ ರೂ. ಹಣ ದಂಪತಿಯಿಂದ ಪಡೆದಿದ್ದಾನೆ. ನಾಣ್ಯಗಳನ್ನು ಪರೀಕ್ಷಿಸಲು ಮುಂದಾದಗ ಆರೋಪಿ ರಮೇಶ್ ಹಾಗೂ ಆತನ ಸಹಚರರು ಪರಾರಿಯಾಗಿದ್ದಾರೆ. ಈ ಕುರಿತು ದಂಪತಿ ಅಬ್ದುಲ್ ರೆಹಮಾನ್ ಮತ್ತು ನಿರೋಷಾ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net