ಬಾಡಿಗೆ ಕಾರು ಪಡೆದು, ಮರಳಿ‌ ನೀಡದೆ ವಂಚನೆ

ಬಾಡಿಗೆ ಕಾರು ಪಡೆದು, ಮರಳಿ‌ ನೀಡದೆ ವಂಚನೆ
ಬಾಡಿಗೆ ಕಾರು ಪಡೆದು, ಮರಳಿ‌ ನೀಡದೆ ವಂಚನೆ
Published on

ಪ್ರಮುಖ ಮುಖ್ಯಾಂಶಗಳು

  • ಮಾರಾಟ ಮಾಡಿರುವ ಶಂಕೆ
  • ಮಾಲೀಕರಿಗೆ ನೀಡದೆ ವಂಚನೆ
ಬಳ್ಳಾರಿ : ಕಾರುಗಳನ್ನು ಬಾಡಿಗೆಗೆ ಪಡೆದು ಮರಳಿ ಮಾಲೀಕರಿಗೆ ನೀಡದೆ ವಂಚಿಸಿರುವ ಬಗ್ಗೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ವಿಶಾಲ್ ನಗರದ ನಿವಾಸಿ ಸಿಕಂದರ್ ಬಾಷಾ ಎಂಬ ಕಾರು ಮಾಲೀಕನ ಬಳಿ ಆರೋಪಿಗಳಾದ ಜಾಹಿದ್ ಪಾಷ, ಆಲೀಂ, ರೌಫ್ ಮತ್ತು ಮಹಮ್ಮದ್ ಅಲಿ ಬಳಿ ಕಾರುಗಳನ್ನು ತಿಂಗಳಿಗೆ 40 ಸಾವಿರ ರೂ. ಬಾಡಿಗೆ ನೀಡುವುದಾಗಿ ನಂಬಿಸಿ ಕಾರುಗಳು ತೆಗೆದುಕೊಂಡಿದ್ದಾರೆ.
ಆದರೆ, ಬಾಡಿಗೆ ಹಣ ನೀಡದೆ ಹಾಗೂ ಕಾರುಗಳನ್ನು ಮರಳಿ ಕೊಡದೆ ಸಂಪರ್ಕಕ್ಕೆ ಸಿಗದೆ ವಂಚಿಸಿದ್ದಾರೆ. ಆರೋಪಿಗಳು ಇದೇ ರೀತಿ ನಗರದ ಸುಮಾರು 20-25 ಜನರಿಂದ ಕಾರುಗಳನ್ನು ಪಡೆದು ಅನ್ಯ ಜಿಲ್ಲೆಗಳಲ್ಲಿ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಕೆಲ ತಿಂಗಳ ಹಿಂದೆಯೂ ಇಂತಹದ್ದೇ ಪ್ರಕರಣ ನಗರದಲ್ಲಿ ನಡೆದಿತ್ತು. ಪ್ರಕರಣ ಬೇಧಿಸಿದ್ದ ಪೊಲೀಸರು 44 ಕಾರುಗಳನ್ನು ವಾರಸುದಾರರಿಗೆ ಹಸ್ತಾಂತರ ಮಾಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net