ನಾಲ್ಕು ಸಾವಿರ ಯೂರಿಯ ಚೀಲ ವಶ

ನಾಲ್ಕು ಸಾವಿರ ಯೂರಿಯ ಚೀಲ ವಶ
ನಾಲ್ಕು ಸಾವಿರ ಯೂರಿಯ ಚೀಲ ವಶ
Published on

ಪ್ರಮುಖ ಮುಖ್ಯಾಂಶಗಳು

  • ಕೈಗಾರಿಕಾ
ಬಳ್ಳಾರಿ : ಇಲ್ಲಿನ ಕೈಗಾರಿಕಾ ಪ್ರದೇಶದ ಗೋದಾಮವೊಂದರಲ್ಲಿ ದಾಳಿ ನಡೆಸಿರುವ ಕೃಷಿ ಅಧಿಕಾರಿಗಳು ಹಾಗೂ ಪೊಲೀಸರು ಅಕ್ರಮವಾಗಿ ದಾಸ್ತಾನು ಇಟ್ಟಿದ್ದ ನಾಲ್ಕು ಸಾವಿರ ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾಳಾ ಸಂತೆಯಲ್ಲಿ ಮಾರಾಟ ಮಾಡಲು ಇವುಗಳನ್ನು ಸಂಗ್ರಹಿಸಿತ್ತು ಎನ್ನಲಾಗಿದೆ. ಒಟ್ಟಾರೆ 45 ಕೆ.ಜಿ. ತೂಕದ 10.72 ಲಕ್ಷ ರೂ. ಮೌಲ್ಯದ ನಾಲ್ಕು ವಶಕ್ಕೆ ಪಡೆಯಲಾಗಿದೆ. ಪೊಲೀಸರಿಗೆ ಸಿಕ್ಕ ದೂರು ಆಧರಿಸಿ ಈ ದಾಳಿ ನಡೆಸಲಾಗಿದೆ. ತನಿಖೆ ನಡೆದಿದ್ದು, ಈವರೆಗೆ ಯಾರನ್ನು ಬಂಧಿಸಿಲ್ಲ. ಈ ಕುರಿತು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
====
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net