ಜಿಲ್ಲೆಯ ನಾಲ್ವರು ಕರಾಟೆ ಸ್ಪರ್ಧೆಗೆ ಆಯ್ಕೆ

ಎಂ.ಮೃತ್ಯುಂಜಯ ಸ್ವಾಮಿ
ಎಂ.ಮೃತ್ಯುಂಜಯ ಸ್ವಾಮಿ
Published on

ಪ್ರಮುಖ ಮುಖ್ಯಾಂಶಗಳು

  • ಸ್ಪರ್ಧೆ
ಬಳ್ಳಾರಿ : ಮಲೇಶಿಯಾದಲ್ಲಿ ಮೇ.8ರಿಂದ 10ರವರೆಗೆ ನಡೆಯಲಿರುವ 22ನೇ ಅಂತರಾಷ್ಟ್ರೀಯ ಒಕಿನವ ಗೋಜು ರಾಯ್ ಇಪಾನ್ ಸಿಟಿ ಮುಕ್ತ ಕರಾಟೆ ಸ್ಪರ್ಧೆಗೆ ಜಿಲ್ಲೆಯ ಶ್ರೀ ಪಂಚಾಕ್ಷರಿ ಮಾರ್ಷಲ್ ಆರ್ಟ್ಸ್ ಟ್ರಸ್ಟ್‌ನ ನಾಲ್ವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಬಂಡ್ರಾಳ್ ಎಂ.ಮೃತ್ಯುಂಜಯ ಸ್ವಾಮಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ 25 ವರ್ಷಗಳಿಂದ ಗಾಂಧಿನಗರದ ಶ್ರೀಪಂಚಾಕ್ಷರಿ ಮಾರ್ಷಲ್ ಆರ್ಟ್ಸ್ ಟ್ರಸ್ಟ್ ಮೂಲಕ ಬಾಲ ಭಾರತಿ ಶಾಲೆಯಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಉಚಿತ ಕರಾಟೆ, ಯೋಗ ಹಾಗೂ ಧ್ಯಾನ ತರಬೇತಿ ನೀಡಲಾಗುತ್ತಿದೆ ಎಂದರು.
ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗಳು ಮತ್ತು ವಿಶೇಷ ತರಬೇತಿ ಶಿಬಿರಗಳನ್ನು ಟ್ರಸ್ಟ್ ವತಿಯಿಂದ ಯಶಸ್ವಿಯಾಗಿ ಆಯೋಜಿಸಲಾಗಿದ್ದು, ಟ್ರಸ್ಟ್‌ನ ವಿದ್ಯಾರ್ಥಿಗಳು ಈ ಹಿಂದೆ ಶ್ರೀಲಂಕಾ, ಇಂಡೋನೇಷಿಯಾ, ಸಿಂಗಾಪುರ್, ಮಲೇಶಿಯಾ ಹಾಗೂ ಜಪಾನ್ ದೇಶಗಳಲ್ಲಿ ನಡೆದ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ ಎಂದರು.
ಮೇ 8ರಿಂದ 10ರವರೆಗೆ ಮಲೇಶಿಯಾದ ತನಜುಂಗ್ ರಮಭೂತಾನ್ ಇಪಾನ್ ಸಿಟಿಯಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಸ್ಪರ್ಧೆಗೆ ಬಾಲ ಭಾರತಿ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿಯರಾದ ನಯೋನಿಕ ಮಂಗಳಂ, ನಕ್ಷತ್ರ ವರ್ಣ ಮಂಗಳಂ, ವೀರಶೈವ ವಿದ್ಯಾವರ್ಧಕ ಸಂಘದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಜ್ವಲ ಗಣೇಶ್ ಮತ್ತು ಡ್ರೀಮ್ ವರ್ಲ್ಡ್ ಶಾಲೆಯ ವಿದ್ಯಾರ್ಥಿ ಮುದಿಯಮಂ ದೇವಗನ್ ಶ್ರೀವತ್ಸ ಆಯ್ಕೆಯಾಗಿದ್ದಾರೆ ಎಂದು ವಿವರಿಸಿದರು.
ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆತ್ಮರಕ್ಷಣೆಯ ಕರಾಟೆ ತರಬೇತಿ ನೀಡಿರುವ ಟ್ರಸ್ಟ್, ಗ್ರಾಮೀಣ ಹಾಗೂ ನಗರ ಭಾಗದ ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು. ಟ್ರಸ್ಟ್ ಗೌರವಾಧ್ಯಕ್ಷ ವಿಕ್ರಮ ಮಹಿಪಾಲ್, ಸದಸ್ಯರಾದ ಎಚ್.ಎಂ. ಅಂಬರೀಶ್, ಚೈತನ್ಯ ಭಡಕ್ಷರಿ, ಆರ್.ಎಂ. ಬಸವರಾಜ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net