ಮಾದರ ಮಹಾಸಭಾ ರಚನೆಗೆ ಚಿಂತನೆ

ಹರಪನಹಳ್ಳಿಯ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರ್ನಾಟಕ ಮಾದರ ಮಹಾಸಭಾ ಸದಸ್ಯತ್ವ ನೋಂದಣಿ ಅಭಿಯಾನದ ಭಿತ್ತಿ ಪತ್ರಗಳನ್ನು ಬಿಡುಗಡೆ ಗೊಳಿಸಲಾಯಿತು. ಹೊಸಪೇಟೆ ಎಪಿಎಂಸಿ ಮಾಜಿ ಅಧ್ಯಕ್ಷ ಸೋಮಶೇಖರ್, ಜಿಲ್ಲಾ ವಿಶೇಷ ಆಹ್ವಾನಿತರಾದ ಮೈದೂರು ರಾಮಣ್ಣ, ಎಸ್.ಎನ್. ಕುಮಾರ್, ಎ.ನಾಗೇಂದ್ರಪ್ಪ, ಶೃಂಗಾರತೋಟ ಲಿಂಗರಾಜ್, ರಾಗಿಮಸಲವಾಡ ಮಹಾಂತೇಶ್, ಒ. ಮಹಾಂತೇಶ್, ಕಬ್ಬಳ್ಳಿ ಪರಸಪ್ಪ, ನೀಲಗುಂದ ಸಣ್ಣಪ್ಪ, ಅರಸನಾಳು ಮಾರುತಿ, ಮರಿಯಮ್ಮನಹಳ್ಳಿ ಮಂಜುನಾಥ, ನಾಗಪ್ಪ ಇತರರಿದ್ದರು.

Published on

ಹರಪನಹಳ್ಳಿ: ಒಕ್ಕಲಿಗರ ಸಂಘ, ವೀರಶೈವ ಮಹಾಸಭಾ ರೀತಿ ಮಾದರ ಮಹಾಸಭಾ ಕಟ್ಟಲು ಚಿಂತನೆ ನಡೆಸಲಾಗಿದ್ದು ಸಮುದಾಯ ಸದಸ್ಯತ್ವ ನೋಂದಣಿಗೆ ಎಲ್ಲರೂ ಒಗ್ಗೂಡಬೇಕೆಂದು ಕರ್ನಾಟಕ ಮಾದರ ಮಹಾಸಭಾ ಜಿಲ್ಲಾಧ್ಯಕ್ಷ ನಿಂಬಗಲ್ ರಾಮಕೃಷ್ಣ ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಸೋಮವಾರ ಕರ್ನಾಟಕ ಮಾದರ ಮಹಾಸಭಾ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನಲ್ಲಿ 1500 ಸದಸ್ಯತ್ವ ನೋಂದಣಿ ಗುರಿ ಹೊಂದಬೇಕು. ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಅಭಿವೃದ್ಧಿಗಾಗಿ ಮಾದಿಗ ಸಮಾಜ ಕಾರ್ಯ ನಿರ್ವಹಿಸಬೇಕಿದೆ. ಸಂಘದ ಚಟುವಟಿಕೆಗಳು ಪ್ರಾರಂಭವಾಗಿ 12 ವರ್ಷ ಕಳೆದಿವೆ. ಸಮರ್ಪಕ ಕಾರ್ಯ ನಿರ್ವಹಣೆ ಕೊರತೆ ಕಾರಣ ಈಗ ಸಕ್ರಿಯವಾಗಿ ಮುನ್ನಡೆಸಲಾಗುತ್ತಿದೆ. ಪಕ್ಷಾತೀತವಾಗಿ ನೋಂದಣಿಗೆ ಶ್ರಮಿಸಬೇಕು ಎಂದರು.
ಮಾದರ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಎಚ್. ಪೂಜಪ್ಪ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲೂ ಸಮಾಜವನ್ನು ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕಿದೆ. ಸಮುದಾಯದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯೇ ಇದರ ಮೂಲ ಉದ್ದೇಶವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೆ ಸ್ಪಂದಿಸುವುದು, ಐಎಎಸ್, ಕೆಎಎಸ್‌ನಂತಹ ಉನ್ನತ ಹುದ್ದೆಗಳ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು ಎಂದರು.
ಮಹಾಸಭಾ ತಾಲೂಕು ಅಧ್ಯಕ್ಷ ಹುಲಿಕಟ್ಟಿ ಚಂದ್ರಪ್ಪ, ಅರಸೀಕೆರೆ ಪೂಜಾರ ಮರಿಯಪ್ಪ, ಡಾ. ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ನಿಚ್ಚವ್ವನಹಳ್ಳಿ ಭೀಮಪ್ಪ, ಕಂಚಿಕೇರಿ ಕೆಂಚಪ್ಪ, ಹಲವಾಗಲು ರಮೇಶ, ಸುರ್ಣಮ್ಮ, ಹಂಚಿಮನೆ ಕೆಂಚಪ್ಪ ಮಾತನಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net