ಬಳ್ಳಾರಿ : ನಗರದ ಗುಂಡಿಗಳು ಮುಚ್ಚುವಂತೆ ಒತ್ತಾಯಿಸಿ, ಇಲ್ಲಿನ ಗಡಗಿ ಚನ್ನಪ್ಪ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ)ದಿಂದ ಗುರುವಾರ ಪ್ರತಿಭಟನೆ ನಡೆಯಿತು.
ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ವಿ.ಎಚ್.ಹುಲುಗಪ್ಪ ಮಾತನಾಡಿ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 39 ವಾರ್ಡ್‌ಗಳಿವೆ. ಒಂದೇ ಒಂದು ವಾರ್ಡ್‌ಗಳಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸಗಳು ಆಗುತ್ತಿಲ್ಲ. ಗುಂಡಿಗಳಿಂದ ಪ್ರತಿನಿತ್ಯ ನೂರಾರು ಜನರು ಅಪಘಾತಗಳಾಗುತ್ತಿದೆ. ಪಾಲಿಕೆ ನಿರ್ಲಕ್ಷೃ ತೋರುತ್ತಿದೆ. ನಗರದ ನಿವಾಸಿಗಳಿಂದ ಕೆಲ ಕಾಲ ತೆರಿಗೆ ಸಂಗ್ರಹಿಸುವ ಕೆಲಸ ಮಾತ್ರವಾಗುತ್ತಿದ್ದು, ಗುಂಡಿ ಮುಚ್ಚುವ ಕಾರ್ಯಕ್ಕೆ ಮಾತ್ರ ಪಾಲಿಕೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ದೂರಿದರು.
ಪಾಲಿಕೆಯ ಸಭೆಯೊಂದರಲ್ಲಿ ನಗರದಲ್ಲಿನ ಗುಂಡಿಗಳನ್ನು ಮುಚ್ಚಿವುದಕ್ಕಾಗಿಯೇ ಸುಮಾರು 40 ಲಕ್ಷ ರೂ. ಮೀಸಲು ಇರಿಸಲಾಗಿತ್ತು. ಆ ಅನುದಾನ ಏನೂ ಮಾಡಿದ್ದರೇ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ನಗರದಲ್ಲಿನ ಗುಂಡಿಗಳು ಮುಚ್ಚದಿದ್ದರೇ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಬಳಿಕ ಗಡಗಿ ಚನ್ನಪ್ಪ ವೃತ್ತದಲ್ಲಿನ ಗುಂಡಿಗಳಲ್ಲಿ ಗಿಡಗಳನ್ನು ನೆಡುವ ಮೂಲಕ ವಿನೂತನವಾಗಿ ಪ್ರತಿಟಿಸಿದರು. ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಮಹಾನಗರ ಪಾಲಿಕೆ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.