ಆಚಾರ-ವಿಚಾರಗಳನ್ನು ತಪ್ಪದೆ ಪಾಲಿಸಿ

ಕಂಪ್ಲಿ ಶಿಕಾರಿ ಕಾಲನಿಯಲ್ಲಿ ಶ್ರೀ ಸರಕ ಸೌಂಡ್ಯ ದೇವಿ ಪೂಜೆಯಲ್ಲಿ ಪೂಜಾರಿ ಗೋವಿಂದಪ್ಪ ಚೌವ್ಹಾಣ್ ಕುದಿವ ಹುಗ್ಗಿಯನ್ನು ತೆಗೆದರು. ಪೂಜಾರಿಗಳಾದ ಮನ್ನಪ್ಪ ಕುಂದುಗೋಳ, ಅಂಜಿನಪ್ಪ, ರಾಮಣ್ಣ, ರುದ್ರಪ್ಪ ಇತರರಿದ್ದರು.
ಕಂಪ್ಲಿ ಶಿಕಾರಿ ಕಾಲನಿಯಲ್ಲಿ ಶ್ರೀ ಸರಕ ಸೌಂಡ್ಯ ದೇವಿ ಪೂಜೆಯಲ್ಲಿ ಪೂಜಾರಿ ಗೋವಿಂದಪ್ಪ ಚೌವ್ಹಾಣ್ ಕುದಿವ ಹುಗ್ಗಿಯನ್ನು ತೆಗೆದರು. ಪೂಜಾರಿಗಳಾದ ಮನ್ನಪ್ಪ ಕುಂದುಗೋಳ, ಅಂಜಿನಪ್ಪ, ರಾಮಣ್ಣ, ರುದ್ರಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುದಿಯುವ ಹುಗ್ಗಿ ತೆಗೆಯುವ ಹರಕೆ

ಆಚಾರ-ವಿಚಾರಗಳನ್ನು ತಪ್ಪದೆ ಪಾಲಿಸಿ

ಕಂಪ್ಲಿ: ಪಟ್ಟಣದ ಶಿಕಾರಿ ಕಾಲನಿಯಲ್ಲಿ ಅಲೆಮಾರಿ ಬುಡಕಟ್ಟು ಪಾರ್ದಿ ಸಮುದಾಯದ ಶ್ರೀಸರಕ ಸೌಂಡ್ಯ ದೇವಿ, ಖುದಾ(ಶಿವ)ಪಾರಧನ್‌ದೇವಿ (ದ್ಯಾಮವ್ವ), ಜೋಡಲಿದೇವಿ (ಗಂಗಮ್ಮದೇವಿ), ಸೀಳ್ದೇವಿ (ಮೈಲಮ್ಮದೇವಿ) ಸೌಂಡ್ಯ ಬೆಡಗಿನ ದೇವರ ರಜತ ಮೂರ್ತಿ ಮೆರವಣಿಗೆ, ವಿಶೇಷ ಪೂಜೆ, ಪ್ರಾರ್ಥನೆ, ನೈವೇದ್ಯ ಅರ್ಪಣೆ, ಕುದಿಯುವ ಹುಗ್ಗಿ ತೆಗೆಯುವ ಹರಕೆ ಕಾರ್ಯಕ್ರಮಗಳು ಸೋಮವಾರದಿಂದ ಗುರುವಾರದವರೆಗೆ ನೆರವೇರಿದವು.
ರಾಜ್ಯ ಹರಿಣ ಶಿಕಾರಿ ಪಾರ್ದಿ ಮತ್ತು ಹಕ್ಕಿಪಿಕ್ಕಿ ಸಂಘದ ಅಧ್ಯಕ್ಷ ವಾಸುದೇವ್ ಕಾಳೆ ಮಾತನಾಡಿ, ಅಲೆಮಾರಿ ಬುಡಕಟ್ಟು ಸಮುದಾಯದ ಹರಣ ಶಿಕಾರಿ, ಪಾರ್ದಿ, ಹಕ್ಕಿಪಿಕ್ಕಿ ಸಮುದಾಯದವರು ಜನಗಣತಿಯಲ್ಲಿ ತಪ್ಪದೆ ಹೆಸರು ನೋಂದಣಿ ಮಾಡಿಸಬೇಕು.
ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವತ್ತ ಗಮನ ಹರಿಸಬೇಕು. ಸರ್ಕಾರದಿಂದ ಅಗತ್ಯ ಸೌಲಭ್ಯ ಪಡೆದು ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜಕೀಯ ಪ್ರಗತಿ ಸಾಧಿಸಬೇಕು. ಕುಲ ಸಂಪ್ರದಾಯ ಆಚಾರ-ವಿಚಾರಗಳನ್ನು ತಪ್ಪದೆ ಪಾಲಿಸಬೇಕು ಎಂದರು.
ಕಾರ್ಯದರ್ಶಿ ಆನಂದ್ ಚೌವ್ಹಾಣ್, ಸೌಂಡ್ಯ ದೇವಿ ಬೆಡಗಿನ ಪೂಜಾರಿಗಳಾದ ಮನ್ನಪ್ಪ ಕುಂದುಗೋಳ, ಗೋವಿಂದಪ್ಪ, ಕಂಪ್ಲಿ ಅಂಜಿನಪ್ಪ, ರಾಮಣ್ಣ, ಗೋವಿಂದ, ರುದ್ರಪ್ಪ, ಆದಿವಾಸಿ ರಕ್ಷಣಾ ಪರಿಷತ್ ರಾಜ್ಯ ಕಾರ್ಯದರ್ಶಿ ಎಚ್.ಪಿ.ಶಿಕಾರಿ ರಾಮು, ಹಕ್ಕಿಪಿಕ್ಕಿ ಜಿಲಾಧ್ಯಕ್ಷ ಎಚ್.ಪಿ.ಶ್ರೀಕಾಂತ್, ಯುವಕ ಸಂಘದ ಅಧ್ಯಕ್ಷ ಹರಿಕೃಷ್ಣ, ಜಿಲ್ಲಾ ಹಕ್ಕಿಪಿಕ್ಕಿ ಹರಣ ಶಿಕಾರಿ ಪಾರ್ದಿ ಬುಡಕಟ್ಟು ಮಹಿಳಾ ಸಂಘದ ಅಧ್ಯಕ್ಷೆ ಜಾನಕಿ ನಾಗೇಶ್, ಪ್ರಮುಖರಾದ ಪೂಜಾರಿ ಶಂಕರ, ಗೋಪಿ, ಮಾರುತಿ, ಮಿನಾಕ್ಷಮ್ಮ, ಬಳ್ಳಾರಿ ಮೋಹನ್, ಜೆ.ಬಾಬು, ಗನ್ನುಸಿಂಗ್, ಗದಗಿನ ಮಾರುತಿ ಕಟ್ಟಿಮನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net