ಹಿರಿಯರ ಮಾರ್ಗದರ್ಶನದಲ್ಲಿ ನಡೆಯಿರಿ

ಕುರುಗೋಡಿನ ವಿರಕ್ತ ಮಠದಲ್ಲಿ ಶ್ರೀ ನಿರಂಜನ ಜಗದ್ಗುರು ಸಂಗನ ಬಸವ ಸ್ವಾಮೀಜಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಕೊಟ್ಟೂರು ಮಠದ ಪೀಠಾಧಿಪತಿ ನಿರಂಜನ ಪ್ರಭುಲಿಂಗ ಸ್ವಾಮೀಜಿ ಮಾತನಾಡಿದರು. ಸೋಮಸಮುದ್ರ ಕೊಟ್ಟೂರು ಸ್ವಾಮಿ ಮಠದ ಸಿದ್ದಲಿಂಗ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಅರವಿ ಶರಣಬಸವಗೌಡ, ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರೇಮ್ ಕುಮಾರ್, ಸಿಪಿಐ ವಿಶ್ವನಾಥ್ ಹಿರೇಗೌಡರ್, ಪಿಎಸ್‌ಐ ಸುಪ್ರೀತ್ ವಿರೂಪಾಕ್ಷಪ್ಪ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕಾರ್ತಿಕೋತ್ಸವ
  • ಕಾರ್ಯಕ್ರಮ
  • ಶುಲ್ಕ
ಕುರುಗೋಡು: ಪ್ರತಿಯೊಬ್ಬರೂ ತಪ್ಪು ಮಾಡುವುದನ್ನು ಬಿಡುವುದಾಗಿ ದೀಪ ಹಚ್ಚಿ ದೇವರಲ್ಲಿ ಪ್ರಾರ್ಥಿಸಬೇಕು ಎಂದು ಕೊಟ್ಟೂರು ಮಠದ ಪೀಠಾಧಿಪತಿ ನಿರಂಜನ ಪ್ರಭುಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಕೊಟ್ಟೂರು ಸ್ವಾಮಿ ಶಾಖಾ ವಿರಕ್ತ ಮಠದಲ್ಲಿ ಶ್ರೀ ನಿರಂಜನ ಜಗದ್ಗುರು ಸಂಗನ ಬಸವ ಮಹಾಸ್ವಾಮೀಜಿಗಳ 4ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ತಿಕ ಮಾಸದಲ್ಲಿ ರೈತಾಪಿ ವರ್ಗ ಕೆಲಸ ಮುಗಿಸಿ ಹಿಂದಿರುಗಲು ವಿಳಂಬದ ಹಿನ್ನಲೆ ನಮ್ಮ ಹಿರಿಯರು ಮನೆಮುಂದೆ ಹಾದು ಹೋಗುವವರಿಗೆ ಬೆಳಕಾಗಲೆಂದು ದೀಪ ಹಚ್ಚುತ್ತಿದ್ದರು. ಪುಸ್ತುತ ಸ್ವಲ್ಪ ಕತ್ತಲಾದರೆ ಶುಲ್ಕದ ಭೀತಿಯಲ್ಲಿ ವಿದ್ಯುತ್ ದೀಪ ಆರಿಸುತ್ತೇವೆ. ಇದು ಪೂರ್ವಜರ ಮನಸ್ಥಿತಿ ಮತ್ತು ಈಗಿರುವ ಪರಿಸ್ಥಿತಿ ತಿಳಿಸುತ್ತದೆ. ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯೋಣ ಎಂದರು.
ಸೋಮಸಮುದ್ರ ಕೊಟ್ಟೂರು ಸ್ವಾಮಿ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಮಠ ಸದಾ ಜನರ ಒಳಿತನ್ನು ಬಯಸಿದೆ. ಹೀಗಾಗಿ ದುಶ್ಚಟ ಬಿಡಿಸಲು ಮನೆ ಮನೆಗೆ ತೆರಳಿ ಅರಿವು ಮೂಡಿಸಲಾಗಿದೆ. ಇನ್ನು ಮುಂದೆ ಯಾರಿಗೂ ಅನ್ಯಾಯ, ಮೋಸ ಮಾಡುವುದಿಲ್ಲ. ಜತೆಗೆ ಶತ್ರುವನ್ನು ಸಮಾನವಾಗಿ ಕಾಣುವುದಕ್ಕೆ ಹೊಸ ವರ್ಷಕ್ಕೆ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net