ಕೇಂದ್ರ ಸರ್ಕಾರದ ಮಾರ್ಗಸೂಚಿ ಪಾಲಿಸಿ

ಕಂಪ್ಲಿಯಲ್ಲಿ ಆಯೋಜಿಸಿದ್ದ ಜನಗಣತಿ ತರಬೇತಿ ಕಾರ್ಯಾಗಾರದಲ್ಲಿ ಉಪನ್ಯಾಸಕ ಜೀರು ಮಲ್ಲಿಕಾರ್ಜುನ ತರಬೇತಿ ನೀಡಿದರು.
ಕಂಪ್ಲಿಯಲ್ಲಿ ಆಯೋಜಿಸಿದ್ದ ಜನಗಣತಿ ತರಬೇತಿ ಕಾರ್ಯಾಗಾರದಲ್ಲಿ ಉಪನ್ಯಾಸಕ ಜೀರು ಮಲ್ಲಿಕಾರ್ಜುನ ತರಬೇತಿ ನೀಡಿದರು.
Published on
ಕಂಪ್ಲಿ: ಜನಗಣತಿ ಕಾರ್ಯವನ್ನು ಜಾಗೂರುಕವಾಗಿ ನಿರ್ವಹಿಸಬೇಕು ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜನಗಣತಿ ಪ್ರಥಮ ಹಂತದ ಮನೆ ಪಟ್ಟಿ ಕಾರ್ಯಾಚರಣೆ ಕರ್ತವ್ಯ ಕುರಿತು ಮೇಲ್ವಿಚಾರಕರು ಮತ್ತು ಗಣತಿದಾರರ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ಜನಗಣತಿ ಕಾರ್ಯದಲ್ಲಿ ಗಣತಿದಾರರು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು.
ಅಧಿಕಾರಿ ಜಿ.ಪಂಪಾಪತಿ ಮಾತನಾಡಿ, ಜನಗಣತಿ ನಿಮಿತ್ತ 2026ರ ಏ.16ರಿಂದ ಮೇ 15ರತನಕ ಮೊದಲ ಹಂತದಲ್ಲಿ ಮನೆ ಮನೆಗೆ ಭೇಟಿ ನೀಡಿ ಮನೆ, ಕಟ್ಟಡಗಳ ಗಣತಿ ಕಾರ್ಯದೊಂದಿಗೆ ಜನಗಣತಿ ನಿರ್ದೇಶನಾಲಯ ಸೂಚಿಸಿದ 34 ಪ್ರಶ್ನೆಗಳಿಗೆ ಉತ್ತರ ಸಂಗ್ರಹಿಸಲಾಗುವುದು. 2027ರ ಫೆ.9ರಿಂದ ಫೆ.28ರತನಕ ಎರಡನೇ ಹಂತದಲ್ಲಿ ಜನಗಣತಿ ಕಾರ್ಯ ಆರಂಭವಾಗಲಿದೆ. ತಾಲೂಕಿನ ಜನಗಣತಿ ಕಾರ್ಯದಲ್ಲಿ 37 ಮೇಲ್ವಿಚಾರಕರು, 221 ಗಣತಿದಾರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಉಪನ್ಯಾಸಕರಾದ ಡಾ.ಮಹೇಶ್, ಜೀರು ಮಲ್ಲಿಕಾರ್ಜುನ, ಡಾ.ಚಂದ್ರಶೇಖರ ಬಿಳಿಗುಡ್ಡ, ಖಲೀಲ್ ತರಬೇತಿ ನೀಡಿದರು. ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಆರ್‌ಒ ವೈ.ಎಂ.ಜಗದೀಶ, ಇಸಿಒ ಟಿ.ಎಂ.ಬಸವರಾಜ, ಎಂ.ರೇವಣ್ಣ, ಪುರಸಭೆ, ತಾಲೂಕು ಕಚೇರಿ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net