ಚೆನ್ನೈದಿಂದ ಆಗಮಿಸಿದ್ದ ಲಾರಿಯು ನಗರದ ಎಂ.ಜಿ.ಬಳಿಯಿರುವ ಯಮಹ ಶೋ ರೂಮ್‌ಗೆ ಇಪ್ಪತ್ತು ದ್ವಿಚಕ್ರಗಳು ವಿತರಿಸಿ, ಉಳಿದ ದಿಚಕ್ರ ವಾಹನಗಳನ್ನು ವಿಜಯಪುರದಲ್ಲಿ ವಿತರಿಸಲು ಉದ್ದೇಶಿಸಿತ್ತು. ಆದರೆ, ಬೆಂಕಿಯಿಂದ ನಲವತ್ತು ಬೈಕ್‌ಗಳು ಸಂಪೂರ್ಣವಾಗಿ ಸುಟ್ಟಿದ್ದು, ಲಾರಿಯ ಒಂದಿಷ್ಟು ಭಾಗ ಮಾತ್ರ ಉಳಿದಿದೆ. ಕೂಡಲೇ ಆಗ್ನಿಶಾಮಕದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಹೊಸ ಬೈಕ್‌ಯೊಂದರಲ್ಲಿ ಬ್ಯಾಟರಿಯ ಸ್ಪಾರ್ಕ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಇನ್ನೂ ಪ್ರಕರಣ ದಾಖಲಾಗಿಲ್ಲ ಎಂದು ಬ್ರೂಸ್‌ಪೇಟೆ ಪೊಲೀಸ್ ಠಾಣೆ ಸಿಪಿಐ ತಿಳಿಸಿದರು.