ಬಳ್ಳಾರಿ ತಾಲೂಕಿನ ಚಾಗನೂರು ಗ್ರಾಮದಲ್ಲಿ ಬೆಂಕಿಗೆ ಬಣವೆಗಳಿಗೆ ಸುಡುತ್ತಿರುವುದು
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅವಘಡ
ಬಳ್ಳಾರಿ : ತಾಲೂಕಿನ ಚಾಗನೂರು ಗ್ರಾಮದಲ್ಲಿ ಬುಧವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿ, ಇಪ್ಪತ್ತಕ್ಕೂ ಅಧಿಕ ಮೇವಿನ ಬಣಿವೆಗಳು ಬೆಂಕಿಗಾಹುತಿಯಾಗಿವೆ.
ಒಂದು ಬಣವೆಯಲ್ಲಿ ಕಾಣಿಸಿಕೊಂಡ ಬೆಂಕಿ ತೀವ್ರವಾಗಿ ಹಬ್ಬಿ ಪಕ್ಕದಲ್ಲಿದ್ದ ಇತರೆ ಬಣಿವೆಗಳಿಗೂ ವ್ಯಾಪಿಸಿಕೊಂಡ ಪರಿಣಾಮ ಈ ಅವಘಡ ಸಂಭವಿಸಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ, ಹರಸಾಹಸಪಟ್ಟು ಬೆಂಕಿಯನ್ನು ನಂದಿಸಿದ್ದಾರೆ. ಆದರೆ ಬೆಂಕಿ ಆರಂಭದಲ್ಲಿ ನಿಯಂತ್ರಣಕ್ಕೆ ಬಾರದ ಕಾರಣ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅವಘಡದಲ್ಲಿ ದೊಡ್ಡ ಪ್ರಮಾಣದ ಹಾನಿ ಸಂಭವಿಸಿದ್ದು, ನಿಖರ ಹಾನಿಯ ಅಂದಾಜು ಇನ್ನಷ್ಟೇ ತಿಳಿದುಬರಬೇಕಿದೆ.