ಸಮಾವೇಶದಲ್ಲಿ ಸಂತ್ರಸ್ತೆಯ ಗುರುತು ಬಹಿರಂಗ: ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಎಫ್‌‌ಐಆರ್ ದಾಖಲು

ಮಾಜಿ ಸಚಿವ ಶ್ರೀರಾಮುಲು
ಮಾಜಿ ಸಚಿವ ಶ್ರೀರಾಮುಲು
Published on

ಪ್ರಮುಖ ಮುಖ್ಯಾಂಶಗಳು

  • ಫೋಕ್ಸೋ ಕಾಯ್ದೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ವಿರುದ್ಧ ಎಫ್​​​​​​ಐಆರ್ ದಾಖಲು
  • ಸಮಾವೇಶದ ಭಾಷಣದ ವೇಳೆ ಪೋಕ್ಸೋ ಸಂತ್ರಸ್ತೆಯ ಗುರುತು ಬಹಿರಂಗ
ಬಳ್ಳಾರಿ: ನಗರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪೋಕ್ಸೋ ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದ್ದ ಶ್ರೀರಾಮುಲು ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ.
ಜ.01ರಂದು ಬಳ್ಳಾರಿಯಲ್ಲಿ ನಡೆದಿದ್ದ ಹತ್ಯೆ, ಘರ್ಷಣೆ ಖಂಡಿಸಿ ನಗರದ ಎಪಿಎಂಸಿ ಪ್ರಾಂಗಣದಲ್ಲಿ ಜ.17ರಂದು ಬಿಜೆಪಿ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಂಡಿತ್ತು. ಈ ವೇಳೆ ಭಾಷಣದಲ್ಲಿ ತೊಡಗಿದ್ದ ಶ್ರೀರಾಮುಲು, ಮಾತಿನ ಭರದಲ್ಲಿ ಸಂತ್ರಸ್ತೆಯ ಹೆಸರು, ಮಾಹಿತಿ ಬಹಿರಂಗಪಡಿಸಿದರು.
ಸಮಾವೇಶದಲ್ಲಿ ಬಳ್ಳಾರಿ ಗಾಂಜಾ, ಡ್ರಗ್ಸ್ ಹಬ್ ಆಗಿದೆ ಎಂದು ಹೇಳುತ್ತಲೇ ಪೋಕ್ಸೋ ಸಂತ್ರಸ್ತೆಯ ಹೆಸರು, ವಿಳಾಸ ಬಹಿರಂಗಪಡಿಸಿದ ಹಿನ್ನೆಲೆ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವರ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net