ಕೋರ್ಟ್‌ನಲ್ಲಿ ಪ್ರತ್ಯೇಕ ದೂರು ದಾಖಲು

ಜಿ.ಜನಾರ್ದನರೆಡ್ಡಿ
ಜಿ.ಜನಾರ್ದನರೆಡ್ಡಿ
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿ
  • ಅಂಗರಕ್ಷಕ
  • ಪ್ರಕರಣ
ಬಳ್ಳಾರಿ : ಬ್ಯಾನರ್ ಗಲಾಟೆಗೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ಪ್ರತ್ಯೇಕ ದೂರು ದಾಖಲಿಸುವೆ. ಈಗಾಗಲೇ ಬ್ರೂಸ್‌ಪೇಟೆ ಠಾಣೆಯಲ್ಲಿ ಶಾಸಕ ಭರತ್‌ರೆಡ್ಡಿ, ಅಪ್ತ ಸತೀಶ್‌ರೆಡ್ಡಿ, ಎಎಸ್ಪಿ ಕೆ.ಪಿ.ರವಿಕುಮಾರ್, ಡಿವೈಎಸ್ಪಿ ಚಂದ್ರಕಾಂತ್ ನಂದರೆಡ್ಡಿ ವಿರುದ್ಧ ದೂರು ನೀಡಿದ್ದು ಈವರೆಗೂ ಪ್ರಕರಣ ದಾಖಲಿಸಿಲ್ಲ. ಜಿಲ್ಲೆಗೆ ಹೊಸದಾಗಿ ಐಜಿಪಿ, ಎಸ್ಪಿ ಖಡಕ್ ಅಧಿಕಾರಿಗಳು ನೇಮಕಗೊಂಡಿದ್ದು ಯಾವ ರೀತಿಯಲ್ಲಿ ತನಿಖೆ ಮಾಡಲಿದ್ದಾರೆ ಎಂಬುದಾಗಿ ನೋಡುವೆ ಎಂದು ಶಾಸಕ ಜಿ.ಜನಾರ್ದನರೆಡ್ಡಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಗರದ ಎಸ್ಪಿ ಸರ್ಕಲ್‌ನಲ್ಲಿ ಶಾಸಕ ಭರತರೆಡ್ಡಿಯನ್ನು ತಡೆಯಬಹುದಿತ್ತು. ಆದರೆ, ಪೊಲೀಸರೇ ರಕ್ಷಣೆ ನೀಡಿ ಮನೆಯ ಮುಂಭಾಗದವರೆಗೆ ಕರೆದುಕೊಂಡು ಬಂದು ಗಲಭೆ ಎಬ್ಬಿಸಿದ್ದಾರೆ. ಆದ್ದರಿಂದ, ಈ ಘಟನೆಗೆ ಪೊಲೀಸರೇ ಕಾರಣರಾಗಿದ್ದಾರೆ ಎಂದು ದೂರಿದರು. ಈ ಪ್ರಕರಣ ಪ್ರಮುಖ ಆರೋಪಿ ಸತೀಶ್‌ರೆಡ್ಡಿ ಬಂಧಿಸದೆ, ಭರತ್‌ರೆಡ್ಡಿಯ ಚಿಕ್ಕಪ್ಪ ನಾರಾ ಪ್ರತಾಪ್‌ರೆಡ್ಡಿ ಬೆಂಗಳೂರಿಗೆ ಕಳುಹಿಸಲು ಅಂಬ್ಯುಲೆನ್ಸ್ ಹತ್ತಿಸಿದ್ದಾರೆ. ಗೃಹ ಸಚಿವರು ಅಸಮರ್ಥರಿದ್ದಾರೆ ಎಂಬುದಾಗಿ ರಾಜ್ಯದ ಜನತೆ ಹೇಳುತ್ತಿದೆ. ಹಾಲಿ ಶಾಸಕನ ಮೇಲೆ ಮತ್ತೋಬ್ಬ ಶಾಸಕನ ಖಾಸಗಿ ಅಂಗರಕ್ಷಕ ಬುಲೆಟ್ ಹಾರಿಸುತ್ತಾನೆ ಎಂದರೆ ಕರ್ನಾಟಕ ಸಂಸ್ಕೃತಿ ಎಲ್ಲಿಂದ ಎಲ್ಲಿಗೆ ತರಲು ಹೊರಟಿದ್ದಾರೆ.
ಬಿಜೆಪಿಯ ಮಹಿಳಾ ಕಾರ್ಯಕರ್ತೆ ಜ್ಯೋತಿ ಎಂಬುವವರ ಮೇಲೆ ಕಾಂಗ್ರೆಸ್ ಮುಖಂಡ ಥಿಯೇಟರ್ ಶಿವು ಹಲ್ಲೆ ಮಾಡಿದ್ದಾನೆ. ತಮ್ಮ ರಕ್ಷಣೆಗೆ ಮಹಿಳೆಯರು ಖಾರದ ಪುಡಿ ಎರಚಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡರು. ಆರೋಪಿ ಸತೀಶ್‌ರೆಡ್ಡಿಗೆ ಗಲಾಟೆಯಲ್ಲಿ ಏನು ಸಮಸ್ಯೆಯಾಗಿಲ್ಲ. ಪ್ರಕರಣದಿಂದ ತಪ್ಪಿಸಲು ಎಎಸ್ಪಿ ಕೆ.ಪಿ.ರವಿಕುಮಾರ, ಪ್ರತಾಪ್‌ರೆಡ್ಡಿ ಯತ್ನಿಸಿದ್ದಾರೆ. ಈ ಘರ್ಷಣೆ ನಂತರ ಪೊಲೀಸರೇ ಕಾಂಗ್ರೆಸ್‌ನವರಿಂದಲೇ ತಪ್ಪಾಗಿದೆ ಎಂಬುದಾಗಿ ಒಪ್ಪಿಕೊಂಡರು ಎಂದು ಹೇಳಿದರು.
====
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net