ರೈತರಿಗೆ ಹೊರೆಯಾದ ರಸಗೊಬ್ಬರ ಬೆಲೆ

ಕೊಟ್ಟೂರಿನಲ್ಲಿ ಸೋಮವಾರ ಗ್ರೇಡ್-2 ತಹಸೀಲ್ದಾರ್ ಎಂ.ಪ್ರತಿಭಾ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘವು ಮನವಿ ಸಲ್ಲಿಸುವ ಸಂದರ್ಭ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಮಲ್ಲಿಕಾರ್ಜುನ, ಈರುಳ್ಳಿ ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ಕೊಚಾಲಿ ಮಂಜುನಾಥ, ರೈತ ಸಂಘದ ರಾಂಪುರ ಸುಧಾಕರ, ಬಸವರಾಜ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ರಾಜ್ಯ ರೈತ ಸಂಘ ಆರೋಪ
  • ಎಫ್‌ಐಡಿ ನಿಯಮ ಸಡಿಲಿಸಿ, ಯೂರಿಯಾ ವಿತರಣೆ ಸರಳಗೊಳಿಸಿ
ಕೊಟ್ಟೂರು: ರಸಗೊಬ್ಬರ ಬೆಲೆ ಇಳಿಕೆ ಮತ್ತು ಎಫ್‌ಐಡಿ ಸಡಿಲಿಕೆ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘವು ಸೋಮವಾರ ಗ್ರೇಡ್-2 ತಹಸೀಲ್ದಾರ್ ಎಂ.ಪ್ರತಿಭಾ ಅವರಿಗೆ ಮನವಿ ಸಲ್ಲಿಸಿತು.
ಈ ವೇಳೆ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಮಲ್ಲಿಕಾರ್ಜುನ ಮಾತನಾಡಿ, ಕಳೆದ ಐದು ವರ್ಷಗಳಿಗಿಂತ ಈ ವರ್ಷ ರಸಗೊಬ್ಬರದ ಬೆಲೆ ಸಾಕಷ್ಟು ಹೆಚ್ಚಾಗಿದೆ. ರೈತರ ಉತ್ಪಾದನೆಗೂ ಸರಿಯಾದ ಬೆಲೆ ಸಿಗದೆ ಆರ್ಥಿಕ ನಷ್ಟವಾಗಿದೆ. ರಸಗೊಬ್ಬರ ಬೆಲೆ ಕಡಿಮೆ ಮಾಡಬೇಕು. ಯೂರಿಯಾ ಗೊಬ್ಬರಕ್ಕೆ ಎಫ್‌ಐಡಿ ಜಾರಿಗೆ ತಂದು ಎಕರೆಗೆ ಒಂದು ಚೀಲ ಎಂಬ ಹೊಸ ನಿಯಮ ಸಡಿಲಗೊಳಿಸಬೇಕು. ಪೌತಿ ಖಾತೆ ಬದಲಾವಣೆ ಆಗದ ಪರಿಣಾಮ ಯೂರಿಯಾ, ರಸಗೊಬ್ಬರ ದೊರೆಯದಂತಾಗಿದ್ದು, ಸಮಸ್ಯೆ ಪರಿಹರಿಸಬೇಕು ಎಂದರು. ಈರುಳ್ಳಿ ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ಕೊಚಾಲಿ ಮಂಜುನಾಥ, ರೈತ ಸಂಘದ ಸದಸ್ಯರಾದ ರಾಂಪುರ ಸುಧಾಕರ, ಬಸವರಾಜ್, ಕೆಂಚಪ್ಪ, ವೀರಭದ್ರಪ್ಪ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net