ಏನಿದು ಘಟನೆ : ಸಾಲಕ್ಕಾಗಿ ನಕಲಿ ಅರ್ಜಿಗೆ ಸಹಿ ಮಾಡಿ ಕೋಮಲ್ ಪರಶುರಾಂಪುರಿಯಾ ಎಂಬ ಹೆಸರಿನಲ್ಲಿ 1,86,64,202 ರೂ., ಶ್ರೀಕಾಂತ್ ಪರಶುರಾಂಪುರಿಯಾ ಹೆಸರಿನಲ್ಲಿ 2,02,84,100 ರೂ., ವಿಶಾಲ್ ಪರಶುರಾಂಪುರಿಯಾ ಹೆಸರಿನಲ್ಲಿ 1,43,79,830 ರೂ. ಬಾಬು ಲಾಲ್ ಪರಶುರಾಂಪುರಿಯಾ ಹೆಸರಿನಲ್ಲಿ 2,00,15,476 ರೂ. ನಕಲಿ ದಾಖಲೆ ಸೃಷ್ಟಿಸಿ ಒಡಿ ಲೋನ್ ಮಂಜೂರು ಮಾಡಿದ್ದಾನೆ. ಜತೆಗೆ ರಾಧಾಕೃಷ್ಣ ಸೌಹಾರ್ದ ಪತ್ತಿನ ಸಹಕಾರಿ ಸಂಘದಲ್ಲಿನ 16 ಲಕ್ಷ ರೂ. ಮತ್ತು ಶ್ಯಾಮಲಾ ಬಾಯಿ ಅವರ ಖಾತೆಯಲ್ಲಿದ್ದ 6 ಆರು ಲಕ್ಷ ರೂ. ಫಿಕ್ಸೆಡ್ ಡೆಪಾಸಿಟ್ (ಎಫ್‌ಡಿ) ಹಣವನ್ನು ಅವರ ಗಮನಕ್ಕೆ ಬಾರದಂತೆ ಎಫ್‌ಡಿ ಲೋನ್ ಮೂಲಕ ಹಣ ಪಡೆದಿದ್ದಾನೆ. ಒಟ್ಟಾರೆ ಆರು ಜನರ ನಕಲಿ ದಾಖಲೆ ಬಳಸಿ ಒಡಿ ಹಾಗೂ ಎಫ್‌ಡಿ ಲೋನ್ ಪಡೆಯುವ ಹೆಸರಿನಲ್ಲಿ 7,55,20,255 ರೂ. ಹಣ ವಂಚಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.