ಮಗನಿಗೆ ತಂದೆ ಬುದ್ಧಿವಾದ ಹೇಳಿದ್ದಕ್ಕೆ ಆತ್ಮಹತ್ಯೆ

ಮಗನಿಗೆ ತಂದೆ ಬುದ್ಧಿವಾದ ಹೇಳಿದ್ದಕ್ಕೆ ಆತ್ಮಹತ್ಯೆ
ಮಗನಿಗೆ ತಂದೆ ಬುದ್ಧಿವಾದ ಹೇಳಿದ್ದಕ್ಕೆ ಆತ್ಮಹತ್ಯೆ
Published on

ಪ್ರಮುಖ ಮುಖ್ಯಾಂಶಗಳು

  • ಆತ್ಮಹತ್ಯೆ
ಬಳ್ಳಾರಿ : ತಂದೆಯ ಬುದ್ಧಿ ಮಾತಿಗೆ ಮನನೊಂದು ಮಗನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಚೆಳ್ಳಗುರ್ಕಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ತಾಲೂಕಿನ ಚೆಳ್ಳಗುರ್ಕಿ ನಿವಾಸಿ, ಸರ್ಕಾರಿ ಶಾಲಾ ಶಿಕ್ಷಕ ರವಿ ಅವರ ಪುತ್ರ ಲೋಹಿತ್ (17) ಮೃತ. ಮೃತ ಬಾಲಕ ಇತ್ತೀಚೆಗೆಷ್ಟೇ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಫಲಿತಾಂಶದ ನಿರೀಕ್ಷೆಯಲ್ಲಿದ್ದ. ಮಗನು ಗ್ರಾಮದಲ್ಲಿ ರಜಾದಿನದಲ್ಲಿ ತಪ್ಪು ಹಾದಿ ತುಳಿಯಬಾರದೆಂಬ ಉದ್ದೇಶದಿಂದ, ಅನೈತಿಕ ಚಟುವಟಿಕೆಗಳು ಬಿಟ್ಟು ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ಹರಿಸು ಎಂಬುದಾಗಿ ಮಗನಿಗೆ ಬುದ್ಧಿ ಮಾತು ಹೇಳಿದ್ದರು. ತಂದೆಯ ಮಾತುಗಳಿಂದ ತೀವ್ರವಾಗಿ ಮನನೊಂದ ಬಾಲಕನು ಸೋಮವಾರ ತಡರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ಪಿ.ಡಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net