ಚಿನ್ನಿಬಸಪ್ಪ ಕ್ಯಾಂಪ್ ನಿವಾಸಿಗಳಾದ ಬೆಳ್ಳಿ ನಾಗರಾಜ ( 45 ), ದುರುಗೇಶ ( 22) ಮೃತರು. ಮೈನಿಂಗ್ ಕಂಪನಿಯೊಂದರಲ್ಲಿ ಕಾವಲುಗಾರರಾಗಿ ಬೆಳ್ಳಿ ನಾಗರಾಜ ಕೆಲಸ ಮಾಡುತ್ತಿದ್ದರು. ಪ್ಯಾರಾಮೆಡಿಕಲ್ ಓದುತ್ತಿದ್ದ ಮಗ ದುರುಗೇಶ, ತಂದೆ ಬೆಳ್ಳಿ ನಾಗರಾಜ ಅವರನ್ನು ಎಂದಿನಂತೆ ಮೈನಿಂಗ್ ಕಂಪನಿಯ ಕೆಲಸಕ್ಕೆ ಬಿಟ್ಟು ಬರಲು ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದರು.