3 ತಿಂಗಳು ನೀರು ಹರಿಸಿದರೆ ರೈತರಿಗೆ ಅನುಕೂಲ

ಸಂಡೂರಿನಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಶಾಸಕಿ ಅನ್ನಪೂರ್ಣಾ ತುಕಾರಾಮ್ ಮಾತನಾಡಿದರು. ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಇಒ ಮಡಗಿನ ಬಸಪ್ಪ, ಕೆಎಸ್‌ಎಂಸಿ ರಾಜ್ಯ ಉಪಾದ್ಯಕ್ಷ ಎಚ್.ಲಕ್ಷ್ಮಣ ಇತರರಿದ್ದರು.
ಸಂಡೂರಿನಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಶಾಸಕಿ ಅನ್ನಪೂರ್ಣಾ ತುಕಾರಾಮ್ ಮಾತನಾಡಿದರು. ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಇಒ ಮಡಗಿನ ಬಸಪ್ಪ, ಕೆಎಸ್‌ಎಂಸಿ ರಾಜ್ಯ ಉಪಾದ್ಯಕ್ಷ ಎಚ್.ಲಕ್ಷ್ಮಣ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಲಹಾ ಸಮಿತಿ ಸಭೆ
  • ರೈತ
  • ನಾರಿಹಳ್ಳ ಜಲಾಶಯ

3 ತಿಂಗಳು ನೀರು ಹರಿಸಿದರೆ ರೈತರಿಗೆ ಅನುಕೂಲ

ಸಂಡೂರು: ನಾರಿಹಳ್ಳ ಜಲಾಶಯದ ವ್ಯಾಪ್ತಿಯ 5 ಗ್ರಾಮಗಳಿಗೆ ಕಾಲುವೆ ಮೂಲಕ 3 ತಿಂಗಳು ಜಲಾಶಯದ ನೀರು ಹರಿಸಿದರೆ ರೈತರ 2ನೇ ಬೆಳೆಗೆ ಅನುಕೂಲವಾಗಲಿದೆ ಎಂದು ಶಾಸಕಿ ಅನ್ನಪೂರ್ಣಾ ತುಕಾರಾಮ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ನಾರಿಹಳ್ಳ ಜಲಾಶಯದಿಂದ ಎಡದಂಡೆ ಮೂಲಕ ತಾರಾನಗರ, ನಾಗಲಾಪುರ, ಗೌರಿಪುರ, ಎಸ್.ಗಂಗಲಾಪುರ, ತಾಳೂರು ಗ್ರಾಮಗಳ ಜಮೀನುಗಳಿಗೆ ನೀರು ಹರಿಬಿಡಲಾಗುವುದು. ರೈತರು ಅಲ್ಪಾವಧಿ ಬೆಳೆಗಳನ್ನು ಬೆಳೆಯಬೇಕು. ಹಲವು ವರ್ಷಗಳಿಂದ ಬಲದಂಡೆ ಕಾಲೂವೆ ಸಂಪೂರ್ಣ ಮುಚ್ಚಿಹೋಗಿದೆ.
ಸಣ್ಣಪುಟ್ಟ ದುರಸ್ತಿಗಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಕೇಳಿದ್ದ 50 ಕೋಟಿ ರೂ.ಅನುದಾನ ಬರಲಿದೆ. ಅಧಿಕಾರಿಗಳು ಜಲಾಶಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸೂಚಿಸಿದರು.
ತಾರಾನಗರದ ರೈತ ಮುಖಂಡ ದೇವೇಂದ್ರಪ್ಪ ಮಾತನಾಡಿ, ಮುಖ್ಯ ಕಾಲುವೆಗಳನ್ನು ಗ್ರಾಪಂನಿಂದ ದುರಸ್ತಿ ಮಾಡಲಿ. ಜಮೀನಿನ ಪಕ್ಕದ ಕಾಲುವೆಗಳನ್ನು ರೈತರು ಸರಿಪಡಿಸಿಕೊಳ್ಳುತ್ತಾರೆ ಎಂದರು. ನೀರಾವರಿ ಇಲಾಖೆ ಇಂಜಿನಿಯರ್ ಧರ್ಮರಾಜ್ ಮಾತನಾಡಿ, ಇಂದಿನಿಂದ ಅಲ್ಪ ಪ್ರಮಾಣದ ನೀರು ಬಿಡಲಾಗುವುದು. ಇದರಿಂದ ಲೀಕೇಜ್ ಸೇರಿ ವಿವಿಧ ದೋಷಗಳು ತಿಳಿಯುತ್ತವೆ. ರೈತರು ಬೇಡಿಕೆಯಿಟ್ಟ ದಿನದಿಂದ ಪೂರ್ಣ ಪ್ರಮಾಣದಲ್ಲಿ ನೀರು ಬಿಡಲಾಗುವುದು ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆ ಎಡಿ ಹನುಮಪ್ಪ ನಾಯಕ, ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಇಒ ಮಡಗಿನ ಬಸಪ್ಪ, ಕೆಎಸ್‌ಎಂಸಿ ರಾಜ್ಯ ಉಪಾದ್ಯಕ್ಷ ಎಚ್.ಲಕ್ಷ್ಮಣ, ನೀರಾವರಿ ಇಲಾಖೆ ಎಇಇ ನಾಗನಾಥ, ಪುರಸಭೆ ಮುಖ್ಯಾಧಿಕಾರಿ ವಿನಯ ಕುಮಾರಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net