ಸ್ವಂತ ಹಣದಲ್ಲಿ ರಸ್ತೆ ರಿಪೇರಿ ಮಾಡಿದ ರೈತರು

ಮುಷ್ಟುಗಟ್ಟೆ 1ಆರ್ ಕಾಲುವೆ ಪಕ್ಕದ ಸರ್ವಿಸ್ ರಸ್ತೆಗೆ ರೈತರು ಗ್ರಾವೆಲ್ ಹಾಕುತ್ತಿರುವುದು.
ಮುಷ್ಟುಗಟ್ಟೆ 1ಆರ್ ಕಾಲುವೆ ಪಕ್ಕದ ಸರ್ವಿಸ್ ರಸ್ತೆಗೆ ರೈತರು ಗ್ರಾವೆಲ್ ಹಾಕುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ನಿತ್ಯ
  • ಹತ್ತಾರು
  • ರೈತರು
ಕುರುಗೋಡು: ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ನಡೆಗೆ ಬೇಸತ್ತ ರೈತರು ಬಳ್ಳಾರಿ ರಸ್ತೆಯಲ್ಲಿನ ಮುಷ್ಟುಗಟ್ಟೆ 1 ಆರ್ ಕಾಲುವೆ ಪಕ್ಕದ ರಸ್ತೆಯನ್ನು ರೈತರು ಸಂತ ಹಣದಲ್ಲಿ ಶುಕ್ರವಾರ ದುರಸ್ತಿಗೊಳಿದರು.
ಸುಮಾರು 500 ಎಕರೆಗೂ ಹೆಚ್ಚು ಪ್ರದೇಶಕ್ಕೆ ನೀರೊದಗಿಸುವ ಈ ರಸ್ತೆಯಲ್ಲಿ ನಿತ್ಯ ಹತ್ತಾರು ರೈತರು ಎತ್ತಿನ ಬಂಡಿ, ಬೈಕ್, ಟ್ರ್ಯಾಕ್ಟರ್ ಸೇರಿ ಇತರ ವಾಹನ ಮೂಲಕ ಓಡಾಡುತ್ತಾರೆ.
ಈ ರಸ್ತೆಯಲ್ಲಿ ತಗ್ಗು-ಗುಂಡಿ ಬಿದ್ದಿದ್ದು ನಿತ್ಯ ನರಕಯಾತನೆ ಜತೆಗೆ ಜಮೀನು ತಲುಪಲು ಹರಸಾಹಸ ಪಡಬೇಕಾಗಿತ್ತು. ಮಳೆಯಾದರೆ ಕೆಸರು ಗದ್ದೆಯಂತಾಗುವ ರಸ್ತೆಯಲ್ಲಿ ರೈತರಿಗೆ ತ್ಯಾಜ್ಯ ನೀರಿನ ಅಭಿಷೇಕದ ಜತೆಗೆ ರಸ್ತೆ ಮಧ್ಯದಲ್ಲಿ ವಾಹನ ಬಿಟ್ಟು ಕೆಸರಲ್ಲಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇತ್ತು.
ಸಮಸ್ಯೆ ಕುರಿತು ನೀರಾವರಿ ಇಲಾಖೆ ಅಧಿಕಾರಿಗಳಿಗೆ ರೈತರು ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. 150ಕ್ಕೂ ಹೆಚ್ಚು ರೈತರು ಸೇರಿ ತಲಾ ಒಬ್ಬರಿಗೆ ಎರಡು ಸಾವಿರ ರೂ., ನಂತೆ ಒಟ್ಟು ಮೂರು ಲಕ್ಷ ರೂ., ಸಂಗ್ರಹಿಸಿ 3.5 ಕೀ ರಸ್ತೆಗೆ ಗ್ರಾವೆಲ್ ಹಾಕಿ ಅಭಿವೃದ್ಧಿ ಪಡೆಸಿದ್ದಾರೆ. ಮೂರು ವಷರ್ದ ಹಿಂದೆಯೂ ಇದೆ ರೀತಿ ರಸ್ತೆ ದುರಸ್ತಿ ಮಾಡಿಕೊಂಡಿದ್ದೆವು ಎಂದು ರೈತರಾದ ಪೂಜಾರಿ, ಬಸವರಾಜ್, ಸಿದ್ದಬಸಪ್ಪ, ನಾಗರಾಜ ತಿಳಿಸಿದ್ದಾರೆ.
"

ಇಲಾಖೆಯಲ್ಲಿ ವಿಶೇಷ ಅನಿದಾನ ಇಲ್ಲ. ಹೀಗಾಗಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ಬಳಿಕ ರಸ್ತೆ ದುರಸ್ತಿ ಮಾಡಲಾಗುವುದು.

— ಜಿ ರಾಮರೆಡ್ಡಿ ಸಣ್ಣ ನೀರಾವರಿ ಇಲಾಖೆ ಎಇಇ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net