ಡಿಸಿ ಬಳಿ ಗೋಳಾಡಿದ ರೈತರು

ಅಮ್ಮನಕೇರಿ ಗ್ರಾಮದ ಜಮೀನಿಗೆ ಭೇಟಿ ನೀಡಿದ ಡಿಸಿ ಕವಿತಾ ಎಸ್ ಮನ್ನಿಕೇರಿ ಮೆಕ್ಕೆ ಜೋಳದ ಬೆಳೆ ಪರಿಶೀಲಿಸಿದರು. ಜಿಪಂ ಸಿಇಒ ಮಹಮದ್ ಆಲಿ ಅಕ್ರಂಷಾ, ಕೃಷಿ ಸಹಾಯಕ ನಿರ್ದೇಶಕ ತೇಜವರ್ಧನ, ತಹಸೀಲ್ದಾರ್ ವಿ.ಕೆ. ನೇತ್ರಾವತಿ, ತಾಪಂ ಇಒ ನರಸಪ್ಪ, ಕೃಷಿ ಅಧಿಕಾರಿ ಸಾವಿತ್ರಿ ಇತರರಿದ್ದರು.

Published on
ಕೂಡ್ಲಿಗಿ: ಅಮ್ಮನಕೇರಿ ಕ್ರಾಸ್ ಬಳಿಯ ರೈತರ ಜಮೀನುಗಳಿಗೆ ಮಂಗಳವಾರ ಭೇಟಿ ನೀಡಿ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಬರ ಅಧ್ಯಯನ ನಡೆಸಿತು.
ಡಿಸಿ ಕವಿತಾ ಎಸ್ ಮನ್ನಿಕೇರಿ, ಜಿಪಂ ಸಿಇಒ ಮಹಮದ್ ಆಲಿ ಅಕ್ರಂಷಾ ನೇತೃತ್ವದ ತಂಡ ಮೊರಬದ ಎಂ.ಎಂ.ಸಿದ್ದಯ್ಯ ಅವರ ಜಮೀನಿಗೆ ಭೇಟಿ ನೀಡಿ ಬಿತ್ತನೆ ಮಾಡಿದ್ದ ಮೆಕ್ಕೆ ಜೋಳ ಪರಿಶೀಲಿಸಿತು.
ಸ್ಥಳದಲ್ಲಿದ್ದ ಅನೇಕ ರೈತರು ಸಾವಿರಾರು ರೂ. ಸಾಲ ಮಾಡಿ, ಬಿತ್ತನೆ ಬೀಜ, ರಸಗೊಬ್ಬರ ತಂದು ಬಿತ್ತನೆ ಮಾಡಲಾಗಿದೆ. ಆದರೆ ಬೆಳೆಗೆೆ ಮಳೆ ಇಲ್ಲದೆ ಒಣಗಿ ಹೋಗಿದೆ. ಜನ- ಜಾನುವಾರುಗಳನ್ನು ಬದುಕಿಸುವುದು ಹೇಗೆ ಎಂದು ಜಿಲ್ಲಾಧಿಕಾರಿ ಬಳಿ ತಮ್ಮ ಗೋಳು ತೋಡಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net