ಕೊಟ್ಟೂರು: ಕೆ.ಅಯ್ಯನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ರೈತರು ಬುಧವಾರ ಯೂರಿಯಾ ರಸಗೊಬ್ಬರ ಖರೀದಿಸಲು ಮುಗಿಬಿದ್ದರು. ಇದರಿಂದಾಗಿ ಪೊಲೀಸರ ಭದ್ರತೆಯಲ್ಲಿ ರೈತರಿಗೆ ರಸಗೊಬ್ಬರ ಮಾರಾಟ ಮಾಡಲಾಯಿತು.
ಬಿತ್ತನೆ ಬೀಜ, ರಸಗೊಬ್ಬರದ ಅಭಾವದಿಂದ ಬಿತ್ತನೆ ಕಾರ್ಯ ವಿಳಂಬವಾಗುತ್ತಿದೆ. ಸರ್ಕಾರ ಎಫ್‌ಐಡಿ ಕಡ್ಡಾಯಗೊಳಿಸಿರುವುದು ಮತ್ತು ನಿಗದಿತ ಪ್ರಮಾಣದಲ್ಲಿ ಗೊಬ್ಬರ ವಿತರಿಸದಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಬಿತ್ತನೆಬೀಜ ಹಾಗೂ ರಸಗೊಬ್ಬರವನ್ನು ಸಮರ್ಪಕವಾಗಿ ಮಾರಾಟ ಮಾಡಬೇಕೆಂದು ರೈತರು ಆಗ್ರಹಿಸಿದರು.
ಕೆ.ಅಯ್ಯನಹಳ್ಳಿ ಸೊಸೈಟಿ ಅಧ್ಯಕ್ಷ ಸತೀಶ ಮಾತನಾಡಿ, ಸಂಘದ ಸೊಸೈಟಿಗೆ 530 ಬ್ಯಾಗ್ ಯೂರಿಯಾ, 300 ಬ್ಯಾಗ್ ಡಿಎಪಿ ಬಂದಿದ್ದು ಪ್ರತಿ ರೈತರಿಗೆ ಎರಡು ಬ್ಯಾಗ್ ಯೂರಿಯಾ, ಎರಡು ಬ್ಯಾಗ್ ಡಿಎಪಿ ವಿತರಿಸಲಾಗಿದೆ ಎಂದರು.