ಸ್ಥಳೀಯರಿಗೆ ಕಾರ್ಖಾನೆಗಳು ಆದ್ಯತೆ ನೀಡಲಿ

ಸಂಡೂರಿನಲ್ಲಿ ಸಿವಿಲ್, ಟಿಪ್ಪ ಲಾರಿ ಟ್ರಾನ್ಸ್‌ಪೋರ್ಟರ್ಸ್‌ ಅಸೋಸಿಯೇಷನ್‌ಗೆ ಆಯ್ಕೆಯಾದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ಎಂ.ಶಿವಲಿಂಗಪ್ಪ, ಉಪಾಧ್ಯಕ್ಷ ಎಂ.ರಾಮಕೃಷ್ಣ ಹೆಗಡೆ, ಪ್ರಧಾನ ಕಾರ್ಯದರ್ಶಿ ಹನುಮಂತರೆಡ್ಡಿ  ಇತರರಿದ್ದರು.
ಸಂಡೂರಿನಲ್ಲಿ ಸಿವಿಲ್, ಟಿಪ್ಪ ಲಾರಿ ಟ್ರಾನ್ಸ್‌ಪೋರ್ಟರ್ಸ್‌ ಅಸೋಸಿಯೇಷನ್‌ಗೆ ಆಯ್ಕೆಯಾದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ಎಂ.ಶಿವಲಿಂಗಪ್ಪ, ಉಪಾಧ್ಯಕ್ಷ ಎಂ.ರಾಮಕೃಷ್ಣ ಹೆಗಡೆ, ಪ್ರಧಾನ ಕಾರ್ಯದರ್ಶಿ ಹನುಮಂತರೆಡ್ಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿವಿಲ್, ಟಿಪ್ಪರ್ ಲಾರಿ ಟ್ರಾನ್ಸ್‌ಪೋರ್ಟರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಎಂ.ಶಿವಲಿಂಗಪ್ಪ ಹೇಳಿಕೆ
  • ಪದಾಧಿಕಾರಿಗಳ ಆಯ್ಕೆ
ಸಂಡೂರು: ಅದಿರು ಸಾಗಣೆ ಗುತ್ತಿಗೆಯನ್ನು ಸ್ಥಳೀಯರಿಗೆ ನೀಡದೆ ಹೊರಗಿನಿಂದ ಬಂದವರಿಗೆ ನೀಡುತ್ತಿರುವುದನ್ನು ಖಂಡಿಸಿ ಹೋರಾಟ ನಡೆಸಲಾಗುವುದು ಎಂದು ಸಿವಿಲ್, ಟಿಪ್ಪರ್ ಲಾರಿ ಟ್ರಾನ್ಸ್‌ಪೋರ್ಟರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಎಂ.ಶಿವಲಿಂಗಪ್ಪ ಹೇಳಿದರು.
ಪಟ್ಟಣದಲ್ಲಿ ಅಸೋಸಿಯೇಷನ್‌ಗೆ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಬುಧವಾರ ಮಾತನಾಡಿದರು. ಸ್ಥಳೀಯರಲ್ಲಿ ಒಗ್ಗಟ್ಟಿಲ್ಲದಿರುವ ಹಿನ್ನೆಲೆಯಲ್ಲಿ ಕಾರ್ಖಾನೆಗಳು, ಗಣಿಗಳು ಹೊರಗಿನವರಿಗೆ ಆದ್ಯತೆ ನೀಡುತ್ತಿವೆ ಎಂದು ಹೇಳಿದರು.
ಉಪಾಧ್ಯಕ್ಷ ಎಂ.ರಾಮಕೃಷ್ಣ ಹೆಗಡೆ ಮಾತನಾಡಿ, ಈ ಹಿಂದಿನ ಸಂಘಟನೆ ಕ್ರೀಯಾಶೀಲವಾಗಿ ಕೆಲಸ ಮಾಡಲಿಲ್ಲ. ಇದರಿಂದಾಗಿ ಸ್ಥಳೀಯರಿಗೆ ಶೇ.50 ಹಾಗೂ ಹೊರಗಿನವರಿಗೆ ಶೇ.50 ಸಾಗಣೆ ಗುತ್ತಿಗೆ ಈಡೇರಲಿಲ್ಲ ಆದಕ್ಕಾಗಿ ಹೊಸ ಸಂಘಟನೆ ಕಟ್ಟಿ ನೋಂದಣಿ ಮಾಡಿಸಲಾಗಿದೆ ಎಂದರು.

ಪದಾಧಿಕಾರಿಗಳು

ಎಂ.ಶಿವಲಿಂಗಪ್ಪ (ಅಧ್ಯಕ್ಷ ), ಜಗದೀಶ, ಅಡಿವಿಸ್ವಾಮಿ, ಎಚ್.ಬಿ.ಸುಬ್ಬಣ್ಣ, ಮೆಹಬೂಬ್ ಸುಭಾನಿ, ಮೌನೇಶ (ಉಪಾಧ್ಯಕ್ಷರು), ಟಿ.ಸಂದೀಪ್(ಸಹ ಕಾರ್ಯದರ್ಶಿ), ಎಸ್.ವಿಘ್ನೇಶ(ಗೌ.ಅಧ್ಯಕ್ಷ), ಆರ್.ಸತೀಶ (ಖಜಾಂಚಿ), ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರ್.ಲೋಕೇಶ, ಲೋಕೇಶನಾಯ್ಕ, ಪಿ.ಸುರೇಶ್, ಜಿ.ಉಮೇಶಗೌಡ, ಎಂ.ಪವನ್ ಕುಮಾರ್, ಎಚ್.ಹನುಮಂತಪ್ಪ, ದೊಡ್ಡಮನೆ ಬಾಬು, ಎಚ್.ಬಿ.ಗಣೇಶಕು ಮಾರ್, ಎಂ.ಲೇಪಾಕ್ಷಿ, ಎಸ್.ದಕ್ಷಿಣಾಮೂರ್ತಿ, ಎಂ.ಬಸವರಾಜ, ಎಂ.ಲೇಪಾಕ್ಷಿ, ಎಂ.ಮಹ್ಮದ್ ರಫೀಕ್, ಫಕೃದ್ದೀನ್ ಅಲಿ ಅಹ್ಮದ್ ಅವರನ್ನು ಆಯ್ಕೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net