ಮೌಲ್ಯಾಧಾರಿತ ಶಿಕ್ಷಣಕ್ಕೆ ಅನುಕೂಲ

ಹಗರಿಬೊಮ್ಮನಹಳ್ಳಿ ಬಿಆರ್‌ಸಿ ಕಚೇರಿಯಲ್ಲಿ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಇಒ ಪ್ರಭಾಕರ ಬಿಡುಗಡೆಗೊಳಿಸಿದರು. ಬಿಆರ್‌ಸಿ ಮಲ್ಲಿಕಾರ್ಜುನ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹ್ಯಾಟಿ ಲೋಕಪ್ಪ, ವೀರನ ಗೌಡ ಇತರರಿದ್ದರು.
ಹಗರಿಬೊಮ್ಮನಹಳ್ಳಿ ಬಿಆರ್‌ಸಿ ಕಚೇರಿಯಲ್ಲಿ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಇಒ ಪ್ರಭಾಕರ ಬಿಡುಗಡೆಗೊಳಿಸಿದರು. ಬಿಆರ್‌ಸಿ ಮಲ್ಲಿಕಾರ್ಜುನ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹ್ಯಾಟಿ ಲೋಕಪ್ಪ, ವೀರನ ಗೌಡ ಇತರರಿದ್ದರು.
Published on
ಹಗರಿಬೊಮ್ಮನಹಳ್ಳಿ: ವಿದ್ಯಾರ್ಥಿಗಳ ಜ್ಞಾನಾರ್ಜನೆ ಮತ್ತು ಫಲಿತಾಂಶ ಗುಣಮಟ್ಟದಿಂದ ಕೂಡಿರಲು ತಾಲೂಕಿನ ಶಿಕ್ಷಕರ ಸಂಯೋಜನೆಯಲ್ಲಿ ಮೂಡಿಬಂದ ಹೊಸ ದಿಕ್ಕು-ನವ ಹೆಜ್ಜೆ ಪ್ರಶ್ನೆಪತ್ರಿಕೆಗಳು ರಾಜ್ಯಕ್ಕೆ ಮಾದರಿಯಾಗಲಿವೆ ಎಂದು ಬಿಇಒ ಎಂ.ಪ್ರಭಾಕರ ಅಭಿಪ್ರಾಯಪಟ್ಟರು.
ಪಟ್ಟಣದ ಬಿಆರ್‌ಸಿ ಕಚೇರಿಯಲ್ಲಿ 6,7,8ನೇ ತರಗತಿಗಾಗಿ ಸಂಪನ್ಮೂಲ ವ್ಯಕ್ತಿಗಳು ತಯಾರಿಸಿರುವ ‘ಹೊಸದಿಕ್ಕು-ನವಹೆಜ್ಜೆ’ ಕಲಿಕೆಗೆ ಪೂರಕವಾಗುವ ಪ್ರಶ್ನೆಪತ್ರಿಕೆಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ಈ ಪ್ರಶ್ನೆ ಪತ್ರಿಕೆ ಪಠ್ಯ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿ ಚಿಂತನಾ ಶಕ್ತಿ, ಸೃಜನಶೀಲ, ಮೌಲ್ಯಾಧಾರಿತ ಶಿಕ್ಷಣವನ್ನು ಬೆಳೆಸುವ ಉದ್ದೇಶ ಹೊಂದಿವೆ ಎಂದರು.
ಯೋಜನೆಯ ಸಂಯೋಜಕ ಅಂಕಸಮುದ್ರ ಪ್ರೌಢಶಾಲೆ ಶಿಕ್ಷಕ ಕೊಟ್ರೇಶ ಮಾತನಾಡಿ, ಈ ಪ್ರಶ್ನೆಪತ್ರಿಕೆಗಳು ವಿದ್ಯಾರ್ಥಿಗಳ ಜ್ಞಾನದೊಂದಿಗೆ ಸಾಮರ್ಥ್ಯ ಹೆಚ್ಚಿಸಿ, ಮುಂದಿನ ಕಲಿಕೆಯ ಮಾರ್ಗದರ್ಶನ ನೀಡಲಿವೆ ಎಂದರು. ಪ್ರಶ್ನೆಪತ್ರಿಕೆ ತಯಾರಿಕೆ ನೋಡೆಲ್ ಅಧಿಕಾರಿ ಪರಮೇಶ್ವರಯ್ಯ ಸೊಪ್ಪಿಮಠ ಮಾತನಾಡಿ, ತಾಲೂಕನ್ನು ರಾಜ್ಯದ ಆಗ್ರಶ್ರೇಣಿಯತ್ತ ಕೊಂಡೊಯ್ಯುಯವ ಕೆಲಸವಾಗಬೇಕಿದೆ ಎಂದರು.
ಇಸಿಒ ಶಿವಲಿಂಗಸ್ವಾಮಿ, ಎಂ.ಗುರುಬಸವರಾಜ, ಎಚ್.ರುದ್ರಪ್ಪ, ರಿಯಾಜ್, ಮುಖ್ಯಶಿಕ್ಷಕರಾದ ಪುಂಡಲೀಕರೆಡ್ಡಿ, ಮಂಜುಳಾ ಮಂಚಾಲಿ, ಸಂಪನ್ಮೂಲ ವ್ಯಕ್ತಿಗಳಾದ ಎಸ್.ಕೊಟ್ರೇಶ, ಪಿ.ಸುರೇಶ, ಮುರುಘರಾಜ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net