ಕಲಿಕೆಗೆ ವರವಾದ ವಸ್ತು ಪ್ರದರ್ಶನ

 ಕುರುಗೋಡು ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಪ್ರಾತ್ಯಕ್ಷಿಕೆ ಹಾಗೂ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಮಾದರಿಗಳ ಬಗ್ಗೆ ವಿವರಣೆ ನೀಡಿದರು.
ಕುರುಗೋಡು ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಪ್ರಾತ್ಯಕ್ಷಿಕೆ ಹಾಗೂ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಮಾದರಿಗಳ ಬಗ್ಗೆ ವಿವರಣೆ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಂದ ವಿವಿಧ ಮಾದರಿಗಳ ಪ್ರಾತ್ಯಕ್ಷಿಕೆ
  • ಕುರುಗೋಡು ಪಿಎಂಶ್ರೀ ಶಾಲೆ ವಿಜ್ಞಾನ ಪ್ರಾತ್ಯಕ್ಷಿಕೆ
ಕುರುಗೋಡು: ಪಟ್ಟಣದ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಜ್ಞಾನ ಪ್ರಾತ್ಯಕ್ಷಿಕೆ ಮತ್ತು ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಮಾದರಿಗಳು ಪಠ್ಯದ ಜತೆಗೆ ಪಠ್ಯೇತರ ಮಾಹಿತಿ ನೀಡಿದವು.
ಶಾಲೆಯ ಆವರಣದಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು 22 ತಂಡಗಳಾಗಿ ವಿಜ್ಞಾನ, ಗಣಿತ, ಸಮಾಜವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಹಲವು ಮಾದರಿಗಳನ್ನು ಪ್ರದರ್ಶಿಸಿದರು. ಕಲ್ಲು, ಇದ್ದಿಲು, ಮಣ್ಣು ಹತ್ತಿಯ ನೂಲು ಬಳಸಿ ನೀರು ಶುದ್ಧೀಕರಣ ಮಾಡುವ ಸಾಧನ ನೋಡುಗರ ಗಮನ ಸೆಳೆಯಿತು.
ಸರಕು, ಸಾಮಗ್ರಿ, ವಾಹನ ಸ್ಥಳಾಂತರಕ್ಕೆ ಹೈಡ್ರಾಲಿಕ್ ಲಿಫ್ಟ್ ಕಾರ್ಯದ ಉಪಯೋಗದ ಮಾದರಿ ಸಾರ್ವಜನಿಕರ ಮೆಚ್ಚುಗೆ ಪಡೆಯಿತು. ವಾಯುಮಂಡಲ, ಮಾನವ ಸರಪಳಿ, ಬೆಂಕಿ ಮತ್ತು ಗಾಳಿ, ಸೌರಮಂಡಲ ಹಾಗೂ ಗಣಿತ ವಿಷಯಗಳ ಕುರಿತು ವಿದ್ಯಾರ್ಥಿಗಳು ವಿವರಣೆ ನೀಡಿದರು. ಮುಖ್ಯಶಿಕ್ಷಕಿ ಲಕ್ಷ್ಮೀ ಚಕ್ರವರ್ತಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net