ಪಂಚಮಸಾಲಿ ಅಧ್ಯಕ್ಷ ವಿರುದ್ಧ ಅವಿಶ್ವಾಸ ನಿರ್ಣಯ

ಹಗರಿಬೊಮ್ಮನಹಳ್ಳಿಯಲ್ಲಿ ಭಾನುವಾರ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ದೇವರಮನಿ ಶಿವಶರಣ, ರಾಜ್ಯ ಸಮಿತಿಯ   ಕಾನೂನು ಸಲಹೆಗಾರ ಎಂ. ಸೋಮಶೇಖರ ಕೋತ್ತಂಬರಿ, ರಾಜ್ಯ ಮಾಜಿ ಅಧ್ಯಕ್ಷ ಬಸವರಾಜ ದಿಂಡೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಪಟ್ಟಣಶೆಟ್ಟಿ, ನಿಕಟಪೂರ್ವ ಅಧ್ಯಕ್ಷ   ಬಾವಿ ಬೆಟ್ಟಪ್ಪ, ರಾಜ್ಯ ಯುವ ಘಟಕದ ಅಧ್ಯಕ್ಷ ಕಿಚಿಡಿ ಕೊಟ್ರೇಶ, ವಸಂತ ಹುಲ್ಲತ್ತಿ, ಮಂಗಳಮ್ಮ, ರಷ್ಮ ಕುಂಕೋಸ್, ರಾಜೇಶ್ವರಿ, ಆಶಾ ಕಲ್ಲಪ್ಪ, ರೇಣುಕಾ, ಲಲಿತಾ ದೊಡ್ಡಮನಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಹಗರಿಬೊಮ್ಮನಹಳ್ಳಿಯಲ್ಲಿ ಸಂಘದ ಕಾರ್ಯಕಾರಿಣಿ ಸಭೆ
  • ಏಳು ದಿನದಲ್ಲಿ ಉತ್ತರಿಸುವಂತೆ ನೋಟಿಸ್ ನೀಡಲು ನಿರ್ಣಯ

ಹಗರಿಬೊಮ್ಮನಹಳ್ಳಿ:

ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಸೋಮನಗೌಡ ಪಾಟೀಲ್ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸುವ ವಿಚಾರವಾಗಿ ಹಮ್ಮಿಕೊಳ್ಳಲಾಗಿದ್ದ

ರಾಜ್ಯ ಕಾರ್ಯಕಾರಿಣಿ ಸಭೆಯು ಭಾನುವಾರ ಪಟ್ಟಣದ ಹರ ದೇಗುಲದ ಕಲ್ಯಾಣ ಮಂಟಪದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಗಳೊಂದಿಗೆ ಜರುಗಿತು. ಸಭೆಯಲ್ಲಿ ಅಧ್ಯಕ್ಷ ವಿರುದ್ಧ ಅವಿಶ್ವಾಸ

ನಿರ್ಣಯ ಮಂಡಿಸಲಾಯಿತು.

ಮಾಧ್ಯಮಗಳನ್ನು ಬಳಸಿಕೊಂಡು ಸಣ್ಣತನ ಪ್ರದರ್ಶಿಸಿರುವ ಅವರು ತಮ್ಮ ನಿರ್ಣಯದ ಮೂಲಕ ಪದಾಧಿಕಾರಿಗಳನ್ನೇ ಉಚ್ಚಾಟಿಸಿರುವುದಾಗಿ ಬಿಂಬಿಸುತ್ತಿದ್ದಾರೆ ಎಂದು ತೀವ್ರವಾಗಿ

ಕಿಡಿಕಾರಿದರು.

ಸದಸ್ಯತ್ವವೇ ಇಲ್ಲದ ವ್ಯಕ್ತಿಯೊಬ್ಬ ಅಕ್ರಮ ಕೂಟವನ್ನು ಕಟ್ಟಿಕೊಂಡು ಸಮಾಜವನ್ನು ವಿಭಜಿಸುವ ಹುನ್ನಾರ ನಡೆಸಿದ್ದಾರೆ. ಈಗಾಗಲೇ ನಿರ್ಣಯಿಸಿದಂತೆ ಅವಿಶ್ವಾಸ ಮಂಡನೆಯ ನೋಟಿಸ್

ನೀಡಲಾಗುವುದು, ಏಳು ದಿನಗಳ ಒಳಗಾಗಿ ಉತ್ತರಿಸಬೇಕು. ತಪ್ಪಿದ್ದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಗೊಂದಲ ಸೃಷ್ಟಿಸಲು ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಸಮುದಾಯದ ನೈತಿಕ ಸ್ಥೈರ್ಯ ಕುಗ್ಗಿಸಲು ಯತ್ನಿಸುತ್ತಿರುವವರಿಗೆ ಪಾಠ ಕಲಿಸಲಾಗುವುದು

ಎಂದರು.

ಉಮಾಪತಿ, ಜ್ಯೋತಿ ಪ್ರಕಾಶ, ಚಂದ್ರಶೇಖರ ಪೂಜಾರ್, ಸಿದ್ದೇಶ ಬೇಗೂರ್, ಪಿ.ಜಿ. ಶಿವಕುಮಾರ, ಚಂದ್ರಪ್ಪ ಶಿವಮೊಗ್ಗ, ಮಲ್ಲಣ್ಣ ಬೋಸನೂರು, ಸಿ.ಸಿ. ಕರಡಿಕಲ್, ಮಂಜುನಾಥ ಗೌಡ,

ಹಾಗೂ ಫೋಟೋ ವೀರೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net