ಪ್ರತಿಯೊಬ್ಬರೂ ಆರೋಗ್ಯದ ಕಾಳಜಿ ವಹಿಸಿ

ಸಂಡೂರು ಎಸ್.ಪಿ.ಎಸ್.ಬ್ಯಾಂಕ್ ಮತ್ತು ವೆಸ್ಕೊ ಸಂಡೂರು ಹಾಗೂ ಜಿಂದಾಲ್ ಸಂಜೀವಿನಿ ಆಸ್ಪತ್ರೆ ಸಹಯೋಗದಲ್ಲಿ  ಹೃದಯ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಜಿಂದಾಲ್ ಸಂಜೀವಿನಿ ಆಸ್ಪತ್ರೆ ನಿರ್ದೇಶಕ ಮಂಜುನಾಥ ಶನಿವಾರ ಉದ್ಘಾಟಿಸಿದರು. ಸಿಇಒ ಕೆ.ಪ್ರಕಾಶ, ನಿರ್ದೇಶಕರಾದ ಅಂಕಮನಾಳ್ ಸಿದ್ದಪ್ಪ, ಅಂಕಮನಾಳ್ ಮಯೂರ್, ಜ್ಯೋತಿ ನಂಜುಂಡಪ್ಪ, ಚತ್ರಿಕಿ ಅನೂಫ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯ
  • ಉಚಿತ
  • ಶಿಬಿರ
ಸಂಡೂರು: ಹೃದಯಾಘಾತವಾದಾಗ ತಕ್ಷಣ ಪ್ರಾಥಮಿಕ ಚಿಕಿತ್ಸೆ ಕೈಗೊಳ್ಳುವುದು ಮುಖ್ಯವಾಗಿದೆ ಎಂದು ಜಿಂದಾಲ್ ಸಂಜೀವಿನಿ ಆಸ್ಪತ್ರೆ ನಿರ್ದೇಶಕ ಮಂಜುನಾಥ ಹೇಳಿದರು.
ಎಸ್.ಪಿ.ಎಸ್.ಬ್ಯಾಂಕ್ ಮತ್ತು ವೆಸ್ಕೊ ಸಂಡೂರು ಹಾಗೂ ಜಿಂದಾಲ್ ಸಂಜೀವಿನಿ ಆಸ್ಪತ್ರೆ ಸಹಯೋಗದಲ್ಲಿ ರತ್ನದೀಪ ಸಭಾಂಗಣದಲ್ಲಿ ಹೃದಯ ಉಚಿತ ಆರೋಗ್ಯ ತಪಾಸಣಾ ಶಿಬಿರ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುವುದು. ಎಸ್‌ಪಿಎಸ್, ವೆಸ್ಕೊ ಸಹಯೋಗದಲ್ಲಿ ಬಡವರಿಗಾಗಿ 3ತಿಂಗಳಿಗೊಮ್ಮೆ ಆರೋಗ್ಯ ಉಚಿತ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ವೇಳೆ ಹೃದಯಾಘಾತವಾದಲ್ಲಿ ಡೆಮೋ ಮೂಲಕ ತಕ್ಷಣ ಪ್ರಾಥಮಿಕ ಚಿಕಿತ್ಸೆ ಕುರಿತು ತಿಳಿಸಿಕೊಡಲಾಯಿತು ಎಂದರು.
ಸಿಇಒ ಕೆ.ಪ್ರಕಾಶ್ ಮಾತನಾಡಿ, ಒಟ್ಟು 86ಜನಕ್ಕೆ ಚಿಕಿತ್ಸೆ ನೀಡಲಾಯಿತು. ಆದರಲ್ಲಿ 26ಜನಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ಬರಲು ತಿಳಿಸಲಾಯಿತು. ಅಲ್ಲಿಯೂ ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು. ಡಾ.ಖಾಜಾ ಜಾವೇದ್ ಹುಸೇನ್, ಡಾ.ಪ್ರಮೋದ್, ಡಾ.ಅರುಣ್ ತಪಾಸಣೆ ಮತ್ತು ಚಿಕಿತ್ಸೆ ನೀಡಿದರು.
ಬ್ಯಾಂಕ್ ನಿರ್ದೇಶಕರಾದ ಅಂಕಮನಾಳ್ ಸಿದ್ದಪ್ಪ, ಅಂಕಮನಾಳ್ ಮಯೂರ್, ಜ್ಯೋತಿ ನಂಜುಂಡಪ್ಪ, ಚತ್ರಿಕಿ ಅನೂಫ್, ವಕೀಲ ನಾರಾಯಣಾಚಾರ್, ಸಿಇಒ ಕೆ.ಪ್ರಕಾಶ, ವ್ಯವಸ್ಥಾಪಕಿ ಶ್ವೇತಾ, ಅಧಿಕಾರಿಗಳಾದ ವಿಜಯಲಕ್ಷ್ಮೀ, ಅಂಕಮನಾಳ್ ಕೊಟ್ರೇಶಿ, ರಾಮಚಂದ್ರ, ಕುಮಾರ್, ಸಿಬ್ಬಂದಿಗಳಾದ ವಿಶ್ವನಾಥ, ಜಗ್ಗು, ಪೂಜಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net