ಕುರೇಕುಪ್ಪದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಿ

ಕುರೇಕುಪ್ಪದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಆಗ್ರಹಿಸಿ ಸಂಘಟನೆಗಳ ಮುಖಂಡರು ತೋರಣಗಲ್ಲು ಆಸ್ಪತ್ರೆಯಲ್ಲಿ ಡಿಎಚ್‌ಒ ಅಲಕಾನಂದಾ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಕಟ್ಟಡ ಇತರೆ ನಿರ್ಮಾಣಕಾರರ ಫೆಡರೇಷನ್ ಜಿಲ್ಲಾ ಸಹ ಸಂಚಾಲಕ ವಿ.ದೇವಣ್ಣ, ತಾಲೂಕು ಸಂಚಾಲಕ ಸಿ.ಡಿ.ಹಾಲಸ್ವಾಮಿ, ದೇವದಾಸಿ ಮಹಿಳಾ ವಿಮೋಚನ ಸಂಘ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ, ಮುಖಂಡರಾದ ಎನ್.ಅಂಬರೀಶ, ಎನ್.ಮಲ್ಲಯ್ಯ, ಕೆ.ಸಿದ್ದಪ್ಪ, ಎಚ್.ತಾಯಪ್ಪ, ಕೆ.ರಾಮಚಂದ್ರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಡಿಎಚ್‌ಒಗೆ ವಿವಿಧ ಸಂಘಟನೆಗಳ ಮುಖಂಡರ ಮನವಿ

ಸಂಡೂರು: ತಾಲೂಕಿನ ಕುರೇಕುಪ್ಪದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ತೋರಣಗಲ್ಲು ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿ ಡಿಎಚ್‌ಒ ಅಲಕಾನಂದಗೆ ಮಂಗಳವಾರ ಮನವಿ ಸಲ್ಲಿಸಿದರು.

ಕಟ್ಟಡ ಇತರೆ ನಿರ್ಮಾಣಕಾರರ ಫೆಡರೇಷನ್ ಜಿಲ್ಲಾ ಸಹ ಸಂಚಾಲಕ ವಿ.ದೇವಣ್ಣ ಮಾತನಾಡಿ, ಕುರೇಕುಪ್ಪ ಗ್ರಾಪಂಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿ 11ವರ್ಷವಾದರೂ ಮೂಲ ಸೌಲಭ್ಯದಿಂದ ವಂಚಿತವಾಗಿದೆ. ಜನಸಂಖ್ಯೆಗೆ ತಕ್ಕಂತೆ ಅಭಿವೃದ್ಧಿಯಾಗಿಲ್ಲ. ಜನ ನಾನಾ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.

ಗರ್ಭಿಣಿ-ಶಿಶುಗಳ ಆರೋಗ್ಯರಕ್ಷಣೆ ಸವಾಲಾಗಿದೆ. ಮಹಿಳೆಯರು, ವೃದ್ಧರಾದಿಯಾಗಿ ಎಲ್ಲರೂ ಚಿಕಿತ್ಸೆ ಪಡೆಯಲು ತೋರಣಗಲ್ಲು ಅಥವಾ ಬಳ್ಳಾರಿ ಆಸ್ಪತ್ರೆಗೆ ಹೋಗಬೇಕಾಗಿದೆ. ಆದ್ದರಿಂದ ಕುರೇಕುಪ್ಪದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆದು ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net