ನಿವೇಶನಗಳಿಗೆ ಸಂಖ್ಯೆ ನಮೂದಿಸಿ

ಕಂಪ್ಲಿ ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನಗೆ ಮಾರುತಿ ನಗರದ ಬಲಭಾಗದ ನಿವೇಶನಗಳ ಪಟ್ಟಾದಾರರು ಮನವಿ ಸಲ್ಲಿಸಿದರು.
ಕಂಪ್ಲಿ ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನಗೆ ಮಾರುತಿ ನಗರದ ಬಲಭಾಗದ ನಿವೇಶನಗಳ ಪಟ್ಟಾದಾರರು ಮನವಿ ಸಲ್ಲಿಸಿದರು.
Published on
ಕಂಪ್ಲಿ: ಪಟ್ಟಣದ 20ನೇ ವಾರ್ಡ್ ಮಾರುತಿ ನಗರದ ಬಲಭಾಗದ ನಿವೇಶನಗಳಿಗೆ ಸಂಖ್ಯೆ ನಮೂದಿಸುವಂತೆ ಒತ್ತಾಯಿಸಿ ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನಗೆ ಪಟ್ಟಾದಾರರು ಸೋಮವಾರ ಮನವಿ ಸಲ್ಲಿಸಿದರು.
ಪಟ್ಟಾದಾರ ಬಿ.ಗೌಸ್ ಮಾತನಾಡಿ, ಆಶ್ರಯ ಯೋಜನೆಯಡಿ ಪುರಸಭೆಯಿಂದ ಪಟ್ಟಾ ನೀಡಲಾದ ನಿವೇಶನಗಳ ಗುರುತಿನ ಸಂಖ್ಯೆಯ ಕಲ್ಲುಗಳು ಕಿತ್ತುಹೋಗಿವೆ. ಇದರಿಂದಾಗಿ ನಮ್ಮ ನಿವೇಶನಗಳನ್ನು ಗುರುತಿಸಲು ತೊಂದರೆಯಾಗಿದೆ. ನಮ್ಮ ನಿವೇಶನಗಳನ್ನು ಗುರುತಿಸಿ ಕೊಟ್ಟಲ್ಲಿ ಮನೆ ನಿರ್ಮಿಸಿಕೊಳ್ಳುವುದಾಗಿ ತಿಳಿಸಿದರು.
ಪಟ್ಟಾದಾರರಾದ ಚಾಗಿ ಗಂಗಮ್ಮ, ಅಯ್ಯೋದಿ ಲಕ್ಷ್ಮಮ್ಮ, ಶರೀಫಾ, ಕೆ.ರಂಗಪ್ಪ, ಗುತ್ತಿ ಖಾಜಾಮೊಹಿದ್ದೀನ್, ಮಹ್ಮದ್‌ಗೌಸ್, ಪಿ.ಸಲೀಮ್, ಟಿ.ಗೋಪಿ, ಬೀಬೀ, ಬಿ.ಇಮಾಂ, ಖಾಸೀಮ್, ಜಾಕೀರ್, ಇಮ್ರಾನ್, ಎಂ.ಗೌಸ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net